ಜ್ಯೋತಿ ಯುವಕ ಸಂಘ: ಮಡಿಕೇರಿಯ ಇಂದಿರಾನಗರದ ಜ್ಯೋತಿ ಯುವಕ ಸಂಘದ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು.ಬಾಳೆಲೆ: 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಾಳೆಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ಬಾಳೆಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ವಿಶ್ವನಾಥ್ ನೆರವೇರಿಸಿದರು. ಆಸ್ಪತ್ರೆ ಆವರಣದಲ್ಲಿ ಶ್ರಮದಾನದಿಂದ ಸ್ವಚ್ಛಗೊಳಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಡಳಿತ ವೈದ್ಯಾಧಿಕಾರಿ ಡಾ. ಮೊಹಮ್ಮದ್ ಆಶಿಕ್ ಹಾಜರಿದ್ದರು. ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇತರರು ಇದ್ದರು.ಸುಂಟಿಕೊಪ್ಪ: ವಿಕಾಸ್ ಜನಸೇವಾ ಟ್ರಸ್ಟ್ ಜೀವನ ದಾರಿ ಅನಾಥ ಆಶ್ರಮದಲ್ಲಿ 74ನೇ ಸ್ವಾತಂತ್ರೋತ್ಸವದ ಸರಳ ಸಮಾರಂಭದ ಮುಖ್ಯ ಅತಿಥಿಯಾಗಿ ಸುಂಟಿಕೊಪ್ಪ ಠಾಣಾಧಿಕಾರಿ ಹೆಚ್.ವೈ. ವೆಂಕಟರಮಣ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷ ಹೆಚ್.ಕೆ. ರಮೇಶ, ಪ್ರಧಾನ ಕಾರ್ಯದರ್ಶಿ ಮುರುಗೇಶ್, ಡೆನ್ನೀಸ್ ಡಿಸೋಜ, ಜಾಹಿದ್ ಆಹ್ಮದ್, ರಂಜೀತ್ ಕುಮಾರ್, ಎಂ.ಎಸ್. ರವಿ ಸೇರಿದಂತೆ ಆಶ್ರಮದ ನಿವಾಸಿಗರು ಹಾಜರಿದ್ದರು. ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಮೀನುಗಾರಿಕಾ ಇಲಾಖೆ ಉಪನಿರ್ದೇಶಕಿ ಕೆ.ಟಿ. ದರ್ಶನಾ ಧ್ವಜಾರೋಹಣ ನೆರವೇರಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿsಕಾರಿ ವೇಣುಗೋಪಾಲ್, ಸಿಬ್ಬಂದಿಗಳು, ಮಾಜಿ ಸದಸ್ಯರು ಪಂಚಾಯಿತಿ ಪೌರ ಕಾರ್ಮಿಕರು ಹಾಜರಿದ್ದರು.ವರ್ಕ್ಶಾಪ್ ಕಾರ್ಮಿಕರ ಸಂಘ: ನಗರದ ಕೈಗಾರಿಕಾ ಬಡಾವಣೆಯ ವರ್ಕ್ಶಾಪ್ ಕಾರ್ಮಿಕರ ಸಂಘದ ವತಿಯಿಂದ 74ನೇ ಸ್ವಾತಂತ್ರ್ಯ ದಿನವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.
ಸಂಘದ ಹಿರಿಯ ಸದಸ್ಯ ಎಂ.ಎಸ್. ವೆಂಕಟರಮಣ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪಿ. ರಮೇಶ್, ಹಿರಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.ಜೆಡಿಎಸ್ ಶ್ರಮದಾನ: ನಗರ ಯುವ ಜೆಡಿಎಸ್ ಕಾರ್ಯಕರ್ತರು ರೇಸ್ ಕೋರ್ಸ್ ರಸ್ತೆಯ ಗುಂಡಿಗಳನ್ನು ಮುಚ್ಚುವ ಮೂಲಕ ಶ್ರಮದಾನ ನಡೆಸಿ ವಿಶಿಷ್ಟ ರೀತಿಯಲ್ಲಿ 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ನೇತೃತ್ವದಲ್ಲಿ ಹೊಂಡ ಗುಂಡಿಗಳನ್ನು ಮುಚ್ಚಿದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರಸಭೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕೆ.ಎಂ. ಗಣೇಶ್ ನಗರದ ರಸ್ತೆಗಳ ವ್ಯವಸ್ಥೆ ಮತ್ತು ನಗರಸಭೆಯ ನಿರ್ಲಕ್ಷ್ಯದ ವಿರುದ್ಧ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಭಗವತಿ ಮಹಿಳಾ ಸಮಾಜ: ಸ್ಥಳೀಯ ಭಗವತಿ ಮಹಿಳಾ ಸಮಾಜದ ವತಿಯಿಂದ 74ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಸಮಾಜದ ಅಧ್ಯಕ್ಷೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ನೆರವೇರಿಸಿದರು. ಮಾಜಿ ಅಧ್ಯಕ್ಷೆ ಶಿವಚಾಳಿಯಂಡ ದೇವಕ್ಕಿ, ನಾಟೋಳಂಡ ಕಸ್ತೂರಿ, ಕುಂದೈರೀರ ಶಾಂತಿ ತಮ್ಮಯ್ಯ, ಚಿಯಕಪೂವಂಡ ಮುತ್ತುರಾಣಿ ಅಚ್ಚಪ್ಪ, ಅಂಗನವಾಡಿ ಶಿಕ್ಷಕಿ ಪೋರ್ಕೂವಂಡ ಕಾಂತಿ ಮತ್ತಿತರರು ಇದ್ದರು.ಕ್ರೆಸೆಂಟ್ ಶಾಲೆ: ಮಡಿಕೇರಿಯ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಶಾಲೆಯ ಕಾರ್ಯದರ್ಶಿ ಜಿ.ಹೆಚ್. ಮೊಹಮ್ಮದ್ ಹನೀಫ್ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪ್ರಾಂಶುಪಾಲೆ ಜೋಯ್ಸಿ ವಿನಯ ಮಾತನಾಡಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾಗಯ್ಯ ಶೆಟ್ಟಿ ಹಾಜರಿದ್ದರು. ಸುಲ್ಹತ್ ಸ್ವಾಗತಿಸಿ, ಪ್ರಾಂಶುಪಾಲರು ವಂದನಾರ್ಪಣೆ ನಿರ್ವಹಿಸಿದರು. ನೀಮಾ ಸಾಂಸ್ಕøತಿಕ ಕಾರ್ಯಕ್ರಮವನ್ನು ಗೂಗಲ್ ಮೀಟ್ ಮೂಲಕ ನಿರ್ವಹಿಸಿಕೊಟ್ಟರು. ಶಿಕ್ಷಕರಿಂದ ದೇಶಭಕ್ತಿ ಗೀತೆ, ವಿದ್ಯಾರ್ಥಿಗಳಿಂದ ಭಾಷಣ, ನೃತ್ಯ, ಛದ್ಮವೇಷ ಮೊದಲಾದ ಮನೋರಂಜನಾ ಕಾರ್ಯಕ್ರಮವನ್ನು ನೀಡಲಾಯಿತು.ಕಡಂಗ: ಕಡಂಗ ಆಟೋ ಸಂಘದ ವತಿಯಿಂದ 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಟೋ ನಿಲ್ದಾಣದಲ್ಲಿ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಚೋಳಂಡ ಸುಗುಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಧ್ವಜಾರೋಹಣ ಮಾಡಿದರು. ವಿಎಸ್ಎಸ್ಎನ್ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಮಾತನಾಡಿ, ಭಾರತ ದೇಶ ಆಧುನಿಕತೆಯೊಂದಿಗೆ ಪ್ರಗತಿ ಸಾಧಿಸುತ್ತಿದೆ ಎಂದರು.ಚೆಟ್ಟಳ್ಳಿ: ಗ್ರಾಮ ಪಂಚಾಯಿತಿ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಂದೀಶ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಂಜುಳಾ, ಸಿಬ್ಬಂದಿಗಳಾದ ಚಂದ್ರ, ಸಾಹಿರಾ, ಕಂದಸ್ವಾಮಿ, ಗಣೇಶ ಇದ್ದರು.ಮುಳ್ಳೂರು : ಕೋವಿಡ್ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು, ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ-ತಮ್ಮ ಮನೆಗಳಲ್ಲಿ ನೆಲದ ಮೇಲೆ ಭಾರತದ ಭಾವಚಿತ್ರ ರಚಿಸಿ ಅದರ ಮೇಲೆ ಭಾರತದ ವಿವಿಧ ರಾಷ್ಟ್ರ ನಾಯಕರ ಭಾವಚಿತ್ರ ಇರಿಸಿ ಸ್ವತಂತ್ರ್ಯದ ಹಣತೆಯನ್ನು ಬೆಳೆಗಿಸುವುದರ ಮೂಲಕ ವಿನೂತನವಾಗಿ 74ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಿದರು. ಶಿಕ್ಷಕ ಸಿ. ಎಸ್. ಸತೀಶ್, ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಮನೆಗಳ ಮುಂದೆ ಭಾರತದ ಭಾವಚಿತ್ರ, ಬಣ್ಣಬಣ್ಣದ ರಂಗೋಲಿ, ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಇಟ್ಟು ರಾಷ್ಟ್ರೀಯ ಹಬ್ಬವೊಂದನ್ನು ಮನೆಮನೆಗಳಲ್ಲೂ ಹಬ್ಬದಂತೆ ಆಚರಿಸಬಹುದೆಂದು ತೋರಿಸಿಕೊಟ್ಟರು. ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಳಿಕಾಂಭ ಯುವಕ ಸಂಘದ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಅದರ ಜೊತೆಯಲ್ಲಿ ಸಂಘದ 25ಕ್ಕೂ ಹೆಚ್ಚು ಯುವಕರು ಗ್ರಾಮದ ಬಸ್ ತಂಗುದಾಣ ಮತ್ತು ರಸ್ತೆ ಬದಿಯ ಚರಂಡಿಗಳ ಶುಚಿತ್ವ ಮಾಡುವ ಮೂಲಕ ಶ್ರಮದಾನ ಮಾಡಿದರು.
ಈ ಸಂದರ್ಭ ಯುವಕ ಸಂಘದ ಅಧ್ಯಕ್ಷ ಗಿರೀಶ್ ಸೇರಿದಂತೆ ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಅನೇಕ ಗ್ರಾಮಸ್ಥರು ಶ್ರಮದಾನದಲ್ಲಿ ಭಾಗವಹಿಸಿದರು.ಕೂಡಿಗೆ: ಗ್ರಾಮ ಪಂಚಾಯತಿ ವ್ಯಾಪ್ತಿಯ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ನೂತನ ಸಮುದಾಯ ಭವನದ ಆವರಣದಲ್ಲಿ ಬ್ಯಾಡಗೊಟ್ಟ ಗ್ರಾಮಸ್ಥರು ಒಗ್ಗೂಡಿ ಮಕ್ಕಳು ಸೇರಿ 74 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಹಾಡಿಯ ಮುಖಂಡ ಅಪ್ಪು ನೆರವೇರಿಸಿದರು. ಹಾಡಿಯ ಪ್ರಮುಖರಾದ ಆರ್. ಮುತ್ತಣ್ಣ ಶಂಕರ್, ಮುತ್ತ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದರು
ನಾಪೆÇೀಕ್ಲು: ಸ್ಥಳೀಯ ವಾಹನ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ನಗರದ ಮಾರುಕಟ್ಟೆಯ ಆವರಣದಲ್ಲಿ ಸಂಘದ ಅಧ್ಯಕ್ಷ ಎಂ.ಇ. ಅಬ್ದುಲ್ ರಜಾಕ್ ಧ್ವಜಾರೋಹಣ ಮಾಡುವುದರ ಮೂಲಕ 74ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ರಾಷ್ಟ್ರ ಗೀತೆ ಹಾಡಿ ನಂತರ ನೆರೆದಿದ್ದ ಸದಸ್ಯರಿಗೆ ಸಿಹಿ ಹಂಚಲಾಯಿತು. ಈ ಸಂದರ್ಭ ಮಾಜಿ ಅಧ್ಯಕ್ಷ ಕೆ.ಎಂ. ರಮೇಶ್, ಪ್ರಧಾನ ಕಾರ್ಯದರ್ಶಿ ಕೆ.ಕೆ. ಲೋಕೇಶ್, ಕಾರ್ಯದರ್ಶಿ ಜಾಕ್ರಿಯ, ಉಪಾಧ್ಯಕ್ಷ ಎಂ.ಸಿ. ನಾಗರಾಜ್, ಅರೆಯಡ ಸತೀಶ್, ಶ್ರೀಜೇಶ್, ಮತ್ತಿತರರು ಇದ್ದರು.