ಚೆಟ್ಟಳ್ಳಿ, ಆ. 17: ಕಳೆದ ಎರಡು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತಿದ್ದ ಗರ್ಭಧÀರಿಸಿದ್ದ ಹೆಣ್ಣಾನೆ ಇಳಿಜಾರಿನ ಪ್ರದೇಶದಲ್ಲಿ ಜಾರಿ ಬಿದ್ದು ಸಾವನಪ್ಪಿದ ಘಟನೆ ಅಮ್ಮತಿ ಒಂಟಿಯಂಗಡಿಯ ಸಮೀಪದ ಎಡೂರಿನ ಕಾಫಿ ತೋಟದಲ್ಲಿ ನಡೆದಿದೆ.ಎಡೂರಿನ ಕಾಫಿ ತೋಟದಲ್ಲಿ ಕಳೆದೆರಡು ದಿನಗಳ ಹಿಂದೆ ಂದಾಜು 35ರಿಂದ 40 ವಯಸ್ಸಿನ ನಾಲ್ಕು ತಿಂಗಳ ಗರ್ಭಿಣಿ ಹೆಣ್ಣಾನೆ ನೋವಿನಿಂದ ಕಿರುಚಚಾಡುತಿತ್ತು. ಕಾರ್ಮಿಕರಿಂದ ವಿಷಯ ತಿಳಿದ ವನ್ಯಜೀವಿ ಹವ್ಯಾಸಿ ಛಾಯಾಗ್ರಾಹಕ ಕುಂಞÂಂಡ ಮಾಚು ಮಾಚಯ್ಯ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ನಿನ್ನೆದಿನ ನೋವಿನಿಂದ ಬಳಲುತಿದ್ದ ಹೆಣ್ಣಾನೆ ಮುಕ್ಕಾಟಿರ ಬೆಳ್ಯಪ್ಪನವರ ತೋಟದ ಇಳಿಜಾರು ಪ್ರದೇಶದಲ್ಲಿ ಕಾಲು ಜಾರಿದ ರಭಸಕ್ಕೆ ಮರಕ್ಕೆ ಡಿಕ್ಕಿ ಹೊಡೆದು ನೋವಲ್ಲಿ ಒದ್ದಾಡಿ ಬಳಲಿತ್ತು. ಮಾಚ್ಚಯ್ಯ ಅವರು ಉಪಸಂರಕ್ಷಣಾ ಅರಣ್ಯಾಧಿಕಾರಿ ರೋಶಣಿಯವರಿಗೆ ವಿಷಯ ತಿಳಿಸಿದ ಮೇರೆಗೆ ಆರ್‍ಎಫ್‍ಓ ದಿಲೀಪ್, ಚಕ್ಕೆರ ತಮ್ಮಯ್ಯ ಅಮ್ಮತ್ತಿ, ವೀರಾಜಪೇಟೆ, ತಿತಿಮತಿ ಆರ್‍ಆರ್‍ಟಿ ಸಿಬ್ಬಂದಿಗಳಾದ ಮನೋಜ್, ಸಚ್ಚಿನ್, ನಾಗರಾಜ್, ಚಂದ್ರಹಾಸ ತಂಡದೊಂದಿಗೆ ಸ್ಥಳಕ್ಕೆ ತೆರಳಿದರು.

(ಮೊದಲ ಪುಟದಿಂದ) ನೋವಿನಿಂದ ಬಳಲುತ್ತಿರುವ ಹೆಣ್ಣಾನೆಯನ್ನು ಬದುಕಿಸಲು ವೈದ್ಯಾಧಿಕಾರಿ ಮುಜೀಬ್ ಜೌಷಧಿಯೊಂದಿಗೆ ಆಗಮಿಸಿ ಪರಿಶೀಲಿಸಿದಾಗ ಹೆಣ್ಣಾನೆ ಮರಣಪಟ್ಟಿದ್ದನ್ನು ದೃಢಪಡಿಸಿದರು. ನಂತರ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮುಕ್ಕಾಟಿರ ಬೆಳ್ಯಪ್ಪನವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಇಳಿಜಾರು ಪ್ರದೇಶದಲ್ಲಿ ಕಾಲುಜಾರಿದ ರಭಸಕ್ಕೆ ಹೊಟ್ಟೆಯ ಭಾಗಕ್ಕೆ ಏಟು ತಗುಲಿದ ಪರಿಣಾಮ ಪ್ರಾಣಬಿಟ್ಟಿದೆ ಎಂದು ವೈದ್ಯ ಡಾ.ಮುಜೀಬ್ ತಿಳಿಸಿದ್ದಾರೆ. -ಕರುಣ್ ಕಾಳಯ್ಯ