ಮಡಿಕೇರಿ, ಆ. 17: ಜಿಲ್ಲೆಯಲ್ಲಿ ಹೊಸದಾಗಿ 25 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1003 ಪ್ರಕರಣಗಳು ವರದಿಯಾಗಿದ್ದು, 710 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 12 ಮಂದಿ ಸಾವನ್ನಪ್ಪಿದ್ದು, 281 ಪ್ರಕರಣಗಳು ಸಕ್ರಿಯವಾಗಿವೆ.

ಕೋವಿಡ್ ಆಸ್ಪತ್ರೆಯಲ್ಲಿ 64 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 85 ಮಂದಿ, ಹೋಮ್ ಐಸೋಲೇಶನ್‍ನಲ್ಲಿ 132 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 255 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ಮಡಿಕೇರಿಯ ಹಿಲ್ ರಸ್ತೆಯ ಮುನೀಶ್ವರ ದೇವಾಲಯ ಬಳಿಯ 34 ವರ್ಷದ ಮಹಿಳೆ, ಮಡಿಕೇರಿ ಕಾರಗುಂದ ಟೌನ್ ಶಾಲೆ ಬಳಿಯ 33 ವರ್ಷದ ಮಹಿಳೆ, ಸೋಮವಾರಪೇಟೆ ಗಾಂಧಿನಗರದ ಮಾರಿಯಮ್ಮ ದೇವಾಲಯ ಬಳಿಯ 19 ವರ್ಷದ ಪುರುಷ, ಗೋಣಿಕೊಪ್ಪದ 1ನೇ ಬ್ಲಾಕಿನ 53 ವರ್ಷದ ಪುರುಷ, ವೀರಾಜಪೇಟೆ ಗಾಂಧಿನಗರದ 48 ವರ್ಷದ ಪುರುಷ, ಗೋಣಿಕೊಪ್ಪ ಆರೋಗ್ಯ ವಸತಿ ಗೃಹದ 42 ವರ್ಷದ ಮಹಿಳೆ, ಸೋಮವಾರಪೇಟೆ ಹೊಸ ಬಡಾವಣೆಯ ಎಂ.ಜಿ ಬ್ಲಾಕಿನ 4 ವರ್ಷದ ಬಾಲಕಿ, ವೀರಾಜಪೇಟೆ ಬೆಟೋಳಿ ಅಂಚೆಯ ರಾಮನಗರ ಗ್ರಾಮದ 70 ವರ್ಷದ ಪುರುಷ, ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 36 ವರ್ಷದ ಮಹಿಳೆ, ಶಿರಂಗಾಲದ ಶಿರಂಗಾಲ ಗೇಟಿನ ಬಳಿಯ 42 ವರ್ಷದ ಪುರುಷ, ನಾಪೆÇೀಕ್ಲುವಿನ ಕೊಳಕೇರಿಯ 33 ವರ್ಷದ ಮಹಿಳೆ, ಚೇರಂಬಾಣೆ ಕೊಳಗದಾಳು ಅಯ್ಯಪ್ಪ ಕಾಲೋನಿಯ 53 ವರ್ಷದ ಪುರುಷ, ನಾಪೆÇೀಕ್ಲುವಿನ ಭರತ್ ಬೇಕರಿಯ 59 ವರ್ಷದ ಮಹಿಳೆ, ಸೋಮವಾರಪೇಟೆ ಹಾಲೇರಿ ಗ್ರಾಮದ ತತ್ತಿಬಾಣೆ ಪೈಸಾರಿಯ 49 ವರ್ಷದ ಪುರುಷ, ಮಡಿಕೇರಿ ಕಾವೇರಿ ಲೇಔಟಿನ ಸುರಕ್ಷಾ ಹೋಮಿನ 56 ವರ್ಷದ ಪುರುಷ, ಮಡಿಕೇರಿ ಮುತ್ತಪ್ಪ ದೇವಾಲಯ ಹಿಂಭಾಗದ ಮಲ್ಲಿಕಾರ್ಜುನ ನಗರ ಬಳಿಯ 32 ವರ್ಷದ ಮಹಿಳೆ, ಹಾಸನ ಅರಕಲಗೋಡು ಬೈಪಾಸ್ ರಸ್ತೆಯ 25 ಮತ್ತು 24 ವರ್ಷದ ಪುರುಷರು, ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 19 ಮತ್ತು 38 ವರ್ಷದ ಮಹಿಳೆಯರು, ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 36 ವರ್ಷದ ಪುರುಷ, ಮಡಿಕೇರಿ ಮಲ್ಲಿಕಾರ್ಜುನ ನಗರದ 42 ವರ್ಷದ ಮಹಿಳೆ, 17 ವರ್ಷದ ಬಾಲಕ, 10 ವರ್ಷದ ಇಬ್ಬರು ಬಾಲಕಿಯರಿಗೆ ಸೋಂಕು ದೃಢಪಟ್ಟಿದೆ.