ಸೋಮವಾರಪೇಟೆ, ಆ. 17: ಸೋಮವಾರಪೇಟೆ-ಶಾಂತಳ್ಳಿ ಮುಖ್ಯರಸ್ತೆಯ ಆಲೇಕಟ್ಟೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವದರಿಂದ ಒಳದಾರಿಗಳಲ್ಲಿ ಭಾರೀ ಪ್ರಮಾಣದ ವಾಹನಗಳು ಸಂಚರಿಸುತ್ತಿವೆ.
ಇಂತಹ ಒಳದಾರಿಯಲ್ಲಿ ಪ್ರಮುಖ ರಸ್ತೆಯಾಗಿರುವ ಆಲೇಕಟ್ಟೆ ಪದ್ಮಕ್ಯಾಂಟೀನ್ ಮೂಲಕ ಕಾನ್ವೆಂಟ್‍ಬಾಣೆ, ಆಂಜನೇಯ ದೇವಾಲಯ, ಕಕ್ಕೆಹೊಳೆ ಜಂಕ್ಷನ್ ಸಂಪರ್ಕಿಸುವ ರಸ್ತೆಯು ಹೊಂಡಾಗುಂಡಿಗಳ ಆಗರವಾಗಿದ್ದು, ಆಲೇಕಟ್ಟೆಯ ಸೇತುವೆ ಬಳಿಯಲ್ಲಿ ತಾ. 18 ರಂದು (ಇಂದು) ರಸ್ತೆಯ ಗುಂಡಿಗಳಿಗೆ ಬಾಳೆ ಗಿಡ ನೆಟ್ಟು ಪ್ರತಿಭಟಿಸಲು ನಿರ್ಧರಿಸಲಾಗಿದೆ ಎಂದು ಸ್ಥಳೀಯರಾದ ಚೇತನ್, ಮಂಜುನಾಥ್ ಅವರುಗಳು ತಿಳಿಸಿದ್ದಾರೆ.