ವೀರಾಜಪೇಟೆ, ಆ. 17: ಇಲ್ಲಿನ ವಿಜಯನಗರದ ನಿವಾಸಿ ದಿ. ಮುಹಮ್ಮದ್ ಪುತ್ರ ಮುಹಮ್ಮದ್ ಅಲಿ ಆಲಿಯಾಸ್ ಶಫಿ (51) ಸೌದಿ ಅರೇಬಿಯಾದ ಜಿದ್ದಾದಲ್ಲಿ ತಾ. 17ರಂದು ನಿಧನ ಹೊಂದಿರುವುದಾಗಿ ಕುಟುಂಬಸ್ಥರಿಗೆ ಮಾಹಿತಿ ಲಭಿಸಿದೆ. ಕಳೆದ 17 ವರ್ಷಗಳಿಂದ ಸೌದಿ ಅರೇಬಿಯಾದಲ್ಲೇ ಉದ್ಯೋಗದಲ್ಲಿದ್ದು, ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದುದಾಗಿ ತಿಳಿದು ಬಂದಿದೆ. ಮೃತರು ಪತ್ನಿ ಈರ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.