ಮಡಿಕೇರಿ, ಆ.17 : ಪ್ರಸಕ್ತ ಸಾಲು ಸೇರಿದಂತೆ ಕಳೆದ ಮೂರು ವರ್ಷಗಳ ಮುಂಗಾರಿನ ಅವಧಿಯ ಅತಿವೃಷ್ಠಿಯಿಂದ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸಿಗೆ ಅಪಾರ ಹಾನಿ ಸಂಭವಿಸಿದ್ದು, ನಷ್ಟಕ್ಕೆ ಒಳಗಾದ ಬೆಳೆಗಾರರಿಗೆ ಅಗತ್ಯ ಪರಿಹಾರ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕೆಂದು ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಭಾರೀ ಮಳೆಯಿಂದ ಬೆಟ್ಟ, ಗುಡ್ಡಗಳು ಕುಸಿದು ಅಪಾರ ಹಾನಿಯುಂಟಾಗಿದ್ದರೆ, ಅತಿಯಾದ ಮಳೆÉಯಿಂದ ತೋಟಗಳಲ್ಲಿನ ಕಾಫಿ ಉದುರಿ, ಮರಗಳು ಬಿದ್ದು ಕರಿಮೆಣಸಿನ ಬಳ್ಳಿಗಳು ನಾಶವಾಗಿ ಅಪಾರ ಹಾನಿ ಸಂಭವಿಸಿದೆ. ಇದರ ಬಗ್ಗೆ ನೈಜ ಮಾಹಿತಿಗಳನ್ನು ಅರಿತು, ಬೆಳೆಗಾರರಿಗೆ ಶಾಶ್ವತ ಪರಿಹಾರವನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಜ್ಞರು ಮತ್ತು ಬೆಳೆಗಾರರನ್ನು ಒಳಗೊಂಡಂತೆ ‘ಪರಿಶೀಲನಾ ಸಮಿತಿ’ ರಚಿಸುವುದು ಅಗತ್ಯವೆಂದು ಅಭಿಪ್ರಾಯಪಟ್ಟರು.

ಪ್ರಸ್ತಾವನೆಗೆ ಆಗ್ರಹ : ಅತಿವೃಷ್ಟಿಯಿಂದ ಕಾಫಿ, ಕರಿಮೆಣಸು ಕೃಷಿಗೆ ಉಂಟಾಗಿರುವ ಹಾನಿಯನ್ನು ಅಂದಾಜಿಸಲು ಶೀಘ್ರವೇ ಕಾಫಿ ಮಂಡಳಿ ಮತ್ತು ಕಂದಾಯ ಇಲಾಖೆÉಗಳು ತಕ್ಷಣ ಸರ್ವೇ ಕಾರ್ಯಗಳನ್ನು ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವ ಕೆಲಸವಾಗಬೇಕಾಗಿದೆ. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಗಮನ ಸೆಳೆಯುವ ಕಾರ್ಯವನ್ನು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಸದರ ಸಹಕಾರದೊಂದಿಗೆ ಮಾಡಲು ಪ್ರಯತ್ನಿಸುವುದಾಗಿ ಸ್ಪಷ್ಟಪಡಿಸಿದರು.

ಸಭೆÉ ಕರೆಯಿರಿ : ಕೊಡಗು ಜಿಲ್ಲೆಯ ಬೆಳೆಗಾರರು ಪ್ರಾಕೃತಿಕ ವಿಕೋಪದೊಂದಿಗೆ ವನ್ಯಜೀವಿಗಳ ಹಾವಳಿಯಿಂದ ಸಂಕಷ್ಟ್ಟಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು, ಸಂಸದರು ಕಾಳಜಿ ವಹಿಸಿ, ಸಮಸ್ಯೆಯ ಬಗೆಹರಿಕೆಗೆ ಮಾರ್ಗಗಳನ್ನು ಕಂಡುಕೊಳ್ಳಲು ಸಭೆÉ ಕರೆಯುವಂತೆ ದೇವಯ್ಯ ಅವರು ಒತ್ತಾಯಿಸಿದರು.

ಸಂಘÀದ ನಿರ್ದೇಶಕÀ ರಮೇಶ್ ಮುದ್ದಯ್ಯ ಅವರು ಮಾತನಾಡಿ, ಜಿಲ್ಲೆಯ ಬೆಳೆಗಾರ ಕಾಡಾನೆ, ಹುಲಿ ಮೊದಲಾದ ವನ್ಯ ಪ್ರಾಣಿಗಳ ಹಾವಳಿಯಿಂದ ಬೇಸತ್ತಿದ್ದಾನೆ. ಕಾಡಾನೆಗಳ ಉಪಟಳದಿಂದ ತಾನು ಬೆಳೆದ ಕೃಷಿ ಫಸಲನ್ನು ಕಳೆದುಕೊಳ್ಳುತ್ತಿದ್ದಾನೆ. ಅರಣ್ಯ ಇಲಾಖೆÉ ಒಂದಷ್ಟು ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆಯೇ ಹೊರತು ಶಾಶ್ವತ ಪರಿಹಾರ ಕ್ರಮಗಳು ನಡೆಯುತ್ತಿಲ್ಲವೆಂದು ಬೆÉೀಸರ ವ್ಯಕ್ತಪಡಿಸಿದರು.

ಸಂಘದ ನಿರ್ದೇಶಕÀ ಎನ್.ಕೆ.ಅಯ್ಯಣ್ಣ ಅವರು ಮಾತನಾಡಿ, ಕಾಫಿ ಮಂಡಳಿಯ ಅಧಿಕಾರಿಗಳು ಮಳೆಹಾನಿ ಕಾಫಿ ತೋಟಗಳ ಪರಿಶೀಲನೆಗೆ ಮುಂದಾಗದೆ ಕೇವಲ ಗುಡ್ಡ ಕುಸಿತದ ಪ್ರದೇಶಗಳಿಗಷ್ಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಪಿ.ಸಿ.ಕಾವೇರಪ್ಪ ಉಪಸ್ಥಿತರಿದ್ದರು.