ಭಾಗಮಂಡಲ, ಆ. 17: ಸತತ ಹನ್ನೆರಡನೆಯ ದಿನವಾದ ಇಂದು ಕೂಡ, ತಲಕಾವೇರಿಯ ಗಜರಾಜಗಿರಿ ಬೆಟ್ಟ ಕುಸಿತದಿಂದ ತಾ. 6 ರಂದು ಜೀವಂತ ಭೂಸಮಾಧಿಯೊಂದಿಗೆ ಕಣ್ಮರೆಯಾಗಿರುವ ಶಾಂತಾ ಆಚಾರ್ ಹಾಗೂ ಶ್ರೀನಿವಾಸ್ ಪಡಿಲಾಯ ಅವರುಗಳಿಗಾಗಿ ಸಾಕಷ್ಟು ಹುಡುಕಾಟ ನಡೆಸ ಲಾಯಿತು. ಇಂದು ಸಂಜೆಯ ತನಕ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕ ಕೆ.ಜಿ. ಬೋಪಯ್ಯ ಅವರೂ ಖಚಿತಪಡಿಸಿದ್ದಾರೆ.ತಲಕಾವೇರಿಯ ಸರಹದ್ದಿನಲ್ಲಿ ಎನ್‍ಡಿಆರ್ ಎಫ್, ಎಸ್‍ಡಿಆರ್‍ಎಫ್, ಕೊಡಗು ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಅಗ್ನಿಶಾಮಕ ಜಂಟಿಯಾಗಿ ಪ್ರಯತ್ನಿಸಿದರೂ ಯಾವದೇ ಕುರುಹು ಲಭಿಸಿಲ್ಲ ಎಂದು ಅವರು ‘ಶಕ್ತಿ’ ಸಂದರ್ಶನದಲ್ಲಿ ವಿವರಿಸಿದರು.ಅಪಾಯದ ಪರಿಸ್ಥಿತಿ : ಸತತ 12 ದಿನಗಳಿಂದ ತಲಕಾವೇರಿಯ ಪ್ರಧಾನ ಅರ್ಚಕರಾಗಿದ್ದ ಟಿ.ಎಸ್. ನಾರಾಯಣಾಚಾರ್ ಅವರ ಮನೆಯು ಸೇರಿದಂತೆ, ತೀರಾ ಕಡಿದಾಗಿರುವ ಪ್ರದೇಶಗಳಲ್ಲಿ ಮೂರು ಹಿಟಾಚಿಯಂತ್ರಗಳು ಹಾಗೂ ಜೆಸಿಬಿ ಯಂತ್ರಗಳ ಕಾರ್ಯಾಚರಣೆಯಿಂದ ಮತ್ತೆ ಭೂಕುಸಿತದಂತಹ ಅಪಾಯ ಕಾಡುವಂತಾಗಿದೆ ಎಂದು ಅನೀಸ್ ಕಣ್ಮಣಿ ಎಫ್, ಎಸ್‍ಡಿಆರ್‍ಎಫ್, ಕೊಡಗು ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಅಗ್ನಿಶಾಮಕ ಜಂಟಿಯಾಗಿ ಪ್ರಯತ್ನಿಸಿದರೂ ಯಾವದೇ ಕುರುಹು ಲಭಿಸಿಲ್ಲ ಎಂದು ಅವರು ‘ಶಕ್ತಿ’ ಸಂದರ್ಶನದಲ್ಲಿ ವಿವರಿಸಿದರು.

ಅಪಾಯದ ಪರಿಸ್ಥಿತಿ : ಸತತ 12 ದಿನಗಳಿಂದ ತಲಕಾವೇರಿಯ ಪ್ರಧಾನ ಅರ್ಚಕರಾಗಿದ್ದ ಟಿ.ಎಸ್. ನಾರಾಯಣಾಚಾರ್ ಅವರ ಮನೆಯು ಸೇರಿದಂತೆ, ತೀರಾ ಕಡಿದಾಗಿರುವ ಪ್ರದೇಶಗಳಲ್ಲಿ ಮೂರು ಹಿಟಾಚಿಯಂತ್ರಗಳು ಹಾಗೂ ಜೆಸಿಬಿ ಯಂತ್ರಗಳ ಕಾರ್ಯಾಚರಣೆಯಿಂದ ಮತ್ತೆ ಭೂಕುಸಿತದಂತಹ ಅಪಾಯ ಕಾಡುವಂತಾಗಿದೆ ಎಂದು ಅನೀಸ್ ಕಣ್ಮಣಿ 5 ಲಕ್ಷದ ಚೆಕ್ ಅನ್ನು ತಾ. 15 ರಂದು ಉಸ್ತುವಾರಿ ಸಚಿವರು ಹಸ್ತಾಂತರಿಸಿದ್ದಾರೆ. ಈ ಕುರಿತು ಮೃತರ ಕಿರಿಯ ಸಹೋದರ ಟಿ.ಎಸ್. ನಾರಾಯಣಾಚಾರ್ ಮಕ್ಕಳ ಆಕ್ಷೇಪದ ಕುರಿತು ಸರಕಾರಿ ವಕೀಲರ ಅಭಿಪ್ರಾಯ ಪಡೆಯಲಾಗುವದು ಎಂದು ಜಿಲ್ಲಾಧಿಕಾರಿ ಮಾಹಿತಿಯಿತ್ತರು.

ಪಿತೃ ಕಾರ್ಯ : ಈ ನಡುವೆ ಇಂದು ಭಾಗಮಂಡಲದ ಕಾಶಿಮಠದಲ್ಲಿ ನಾರಾಯಣಾಚಾರ್ ಮಕ್ಕಳು, ತಮ್ಮ ತಂದೆ - ತಾಯಿ ಹಾಗೂ ದೊಡ್ಡಪ್ಪ ಅವರಿಗೆ ಸದ್ಗತಿ ಕೋರಿ ಪಿತೃಕಾರ್ಯ ಕೈಗೊಂಡಿ ರುವದಾಗಿಯೂ ಮಾಹಿತಿ ಲಭಿಸಿದೆ. ಮಾತೆ ಶಾಂತ ಅವರ ಮೃತದೇಹ ಲಭಿಸದಿದ್ದರೂ, ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಶಾಂತಿ ಕಾರ್ಯ ನಡೆಸಿರುವದಾಗಿ ತಿಳಿದು ಬಂದಿದೆ.

ಚೆಕ್ ಹಸ್ತಾಂತರ : ತಲಕಾವೇರಿ ಸಹಾಯಕ ಅರ್ಚಕರಾಗಿದ್ದು, ತಾ. 6 ರಂದು ಭೂಸಮಾಧಿ ಯೊಂದಿಗೆ, ಮೂರು ದಿನದ ಹಿಂದೆ ಮೃತದೇಹ ಪತ್ತೆಯಾಗಿದ್ದ ರವಿಕಿರಣ್ ಕುಟುಂಬಕ್ಕೆ ಇಂದು ಭಾಗಮಂಡಲ ನಾಡ ಕಚೇರಿಯಲ್ಲಿ ಶಾಸಕ

ಕೆ.ಜಿ. ಬೋಪಯ್ಯ ಅವರು (ಮೊದಲ ಪುಟದಿಂದ) ರೂ. 5 ಲಕ್ಷದ ಚೆಕ್ ಹಸ್ತಾಂತರಿಸಿದರು. ಮೃತರ ತಂದೆ ರಾಮಕೃಷ್ಣರಾವ್ ದಂಪತಿ ಹಾಗೂ ತಮ್ಮ ಶಶಿಕಿರಣ್ ಚೆಕ್ ಸ್ವೀಕರಿಸಿದರು. ಮಡಿಕೇರಿ ತಹಶೀಲ್ದಾರ್ ಪಿ.ಎಸ್. ಮಹೇಶ್ ಹಾಗೂ ಕಂದಾಯ ಸಿಬ್ಬಂದಿಗಳು ಮತ್ತು ಸ್ಥಳೀಯ ಪ್ರಮುಖರು ಹಾಜರಿದ್ದರು. - ಚಿತ್ರ, ವರದಿ : ಕೆ.ಡಿ. ಸುನಿಲ್