ನಾಪೆÉÇೀಕ್ಲು, ಆ. 17: ಈ ಬಾರಿಯ ಅತಿ ವೃಷ್ಟಿಯಿಂದ ಮನೆ ಕಳೆದುಕೊಂಡ ಕೈಕಾಡು ಗ್ರಾಮದ ಪೇರಿಯಂಡ ಮೋಹನ್ ಕುಟುಂಬಕ್ಕೆ ನಾಪೆÉÇೀಕ್ಲು ಕಾವೇರಿ ಕುಟೀರದ ಪದಾಧಿಕಾರಿಗಳು ಅವರು ವಾಸವಾಗಿರುವ ಪ್ರಾಥಮಿಕ ಶಾಲೆಗೆ ತೆರಳಿ 25 ಕೆ.ಜಿ. ಅಕ್ಕಿ ಮತ್ತು 15,500 ನಗದು ನೀಡಿ ಸಾಂತ್ವನ ಹೇಳಿದರು. ಕಾವೇರಿ ಕುಟೀರದ ಸದಸ್ಯರು ಇತ್ತೀಚೆಗೆ ಅನಾರೋಗ್ಯದಿಂದ ಇದ್ದ ಪತ್ರಕರ್ತ ರಮೇಶ್ ಅವರಿಗೂ ಚಿಕಿತ್ಸೆಗಾಗಿ 10 ಸಾವಿರ ರೂ.ಗಳನ್ನು ನೀಡಿ ಕಷ್ಟಕ್ಕೆ ಸ್ಪಂದಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭ ಕುಟೀರದ ಪದಾಧಿಕಾರಿಗಳಾದ ಕೇಟೋಳಿರ ಹರೀಶ್ ಪೂವಯ್ಯ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಅರೆಯಡ ರತ್ನ ಪೆಮ್ಮಯ್ಯ, ಶಿವಚಾಳಿಯಂಡ ಜಗದೀಶ್, ಅಜ್ಜೇಟಿರ ಬೋಪಣ್ಣ, ಶಿವಚಾಳಿಯಂಡ ಸುಭಾಶ್ ಸೋಮಯ್ಯ, ಪಾಡಿಯಮ್ಮಂಡ ಸುಭಾಶ್, ಶಿವಚಾಳಿಯಂಡ ವಿಜೂ ಪೂಣಚ್ಚ, ಕೇಟೋಳಿರ ಅಶೋಕ್, ಶಿವಚಾಳಿಯಂಡ ದೀಪು, ಮೂವೇರ ಜಾಫ್ರಿ ಬೆಳ್ಯಪ್ಪ, ಮತ್ತಿತರರು ಇದ್ದರು.