ರವಿ ಕಾಣದನ್ನು ಕವಿ ಕಂಡ, ಕವಿ ಕಾಣದನ್ನು ವಿಮರ್ಶಕ ಕಂಡ. ಹೊಸ ಶಿಕ್ಷಣ ನೀತಿ ಈಗ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವಿಸ್ತøತವಾಗಿ ಚರ್ಚೆಯಾಗುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಈ ದೇಶ ಕಾಣುತ್ತಿರುವ ಮೂರನೆಯ ಶಿಕ್ಷಣ ನೀತಿ.

1968 ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಶಿಕ್ಷಣ ನೀತಿ ತದನಂತರ 1986ರ ಶಿಕ್ಷಣ ನೀತಿಯನ್ನು ಪುನರ್ ಪರಿಶೀಲಿಸಿ 1992ರಲ್ಲಿ ಜಾರಿಗೆ ತರಲಾಯ್ತು. ನಂತರ ಈಗ 2020ರಲ್ಲಿ ಸುದೀರ್ಘ ಪರಿಶೀಲನೆ, ವ್ಯಾಪಕ ಚರ್ಚೆಯ ಬಳಿಕ ಈಗ ಅನುಷ್ಠಾನಕ್ಕೆ ಸನ್ನದ್ಧವಾಗಿದೆ.

ಯಾವುದೇ ಒಂದು ನೀತಿಯನ್ನು ರೂಪಿಸುವಾಗ ಅದಕ್ಕೊಂದು ತಾತ್ವಿಕ ನೆಲೆಗಟ್ಟು, ಅನುಷ್ಠಾನಗೊಳಿಸುವ ಕಾರ್ಯಸೂಚಿ ಹಾಗೂ ಕಾಲಘಟ್ಟಗಳು ಜೊತೆಗೆ ಬದಲಾವಣೆ ತರಲು ಬೇಕಾಗುವ ಹೆಚ್ಚುವರಿ ಹೂಡಿಕೆ ಹಾಗೂ ಖರ್ಚುಗಳನ್ನು ನಿಭಾಯಿಸಲು ಬೇಕಾದ ಆರ್ಥಿಕ ರೂಪುರೇಷೆ. ಈ ನೆಲೆಯಲ್ಲಿ ವಿಶ್ಲೇಷಿಸಿದಾಗ ಈ ನೀತಿಯಲ್ಲಿ ಹಲವಷ್ಟು ಗಮನಾರ್ಹ ಅಂಶಗಳು ಒಳಗೊಂಡಿದೆ. ಜಾಗತಿಕ ಬದಲಾವಣೆಯನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ಜ್ಞಾನ, ಕೌಶಲ್ಯಭರಿತ, ಸದೃಢ ರಾಷ್ಟ್ರ ನಿರ್ಮಾಣದ ಕನಸು ಈ ನೀತಿಯಲ್ಲಿ ಕಂಡುಬರುತ್ತದೆ.

ಇಲ್ಲಿ ಬದಲಾವಣೆಯನ್ನು ಒಂದು ಹಂತದಲ್ಲಿ ಮಾತ್ರ ಅಳವಡಿಸದೆ ಪೂರ್ವ ಪ್ರಾಥಮಿಕ ಶಾಲೆಯಿಂದ ಆರಂಭಿಸಿ ಉನ್ನತ ಶಿಕ್ಷಣ, ವಿಶ್ವವಿದ್ಯಾನಿಲಯ, ಸಂಶೋಧನಾ ಕೇಂದ್ರಗಳ ಸ್ಥಾಪನೆ ಹಾಗೂ ನಿರ್ವಹಣೆಯ ಕುರಿತು ಕೂಲಂಕಷವಾಗಿ ವಿವರಿಸಲಾಗಿದೆ. ಸಾರ್ವತ್ರಿಕ ಹಾಗÀೂ ಸಮಾನ ಶಿಕ್ಷಣದ ದೃಷ್ಟಿಯಲ್ಲಿ ಈ ಶಿಕ್ಷಣವನ್ನು ರೂಪಿಸಲಾಗಿದೆ.

ಮುಖ್ಯಾಂಶಗಳು

1. 10+2+3 ಮಾದರಿಯ ಬದಲು 5+3+3+4 ಮಾದರಿಯನ್ನು ವಯಸ್ಸಿಗೆ ಅನುಗುಣವಾಗಿ ಜಾರಿಗೆ ತರುವ ಪ್ರಯತ್ನವನ್ನು ಯೋಜಿಸಿದೆ. ವಯೋಮಾನ 3ರಿಂದ 8 ಪ್ರಾರಂಭಿಕ ಬಾಲ್ಯ ಶಿಕ್ಷಣ, 8 ರಿಂದ 11 ಪೂರ್ವ ತಯಾರಿ ಶಿಕ್ಷಣ, 11ರಿಂದ 14 ಮಾದ್ಯಮಿಕ ಶಿಕ್ಷಣ ಹಾಗೂ 14 ರಿಂದ 18 ಪ್ರೌಢಶಿಕ್ಷಣ. ಎಲ್ಲಾ ಹಂತಗಳಲ್ಲಿ ಸ್ಪಂದನಾಶೀಲ ಪಠ್ಯಕ್ರಮ ಹಾಗೂ ಬೋಧನಾ ಕ್ರಮವನ್ನು ಅಳವಡಿಸಲಾಗುವುದು.

2. ಶಾಲಾ ಶಿಕ್ಷಣವು ಕನಿಷ್ಟ 5ನೇ ತರಗತಿಯವರೆಗೆ ಅಥವಾ 8ನೇ ತರಗತಿಯವರೆಗೆ ಮಾತೃಭಾಷೆ ಹಾಗೂ ಸ್ಥಳೀಯ ಭಾಷೆಯಲ್ಲೇ ಬೋಧನೆ.

3. ತ್ರಿಭಾಷಾ ಸೂತ್ರವನ್ನು ಕಟ್ಟುನಿಟ್ಟಿನಲ್ಲಿ ಅಳವಡಿಕೆ.

4. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ (ಓಂಖಿIಔಓಂಐ ಅUಖಖIಅUಐUಒ ಈಖಂಒಇ Wಔಖಏ) ಹೊಸ ಪಠ್ಯ ಪುಸ್ತಕಗಳ ಅಭಿವೃದ್ಧಿ ಹಾಗೂ ಉತ್ತಮ ಗುಣಮಟ್ಟದ ಭಾಷಾಂತರದ ಮೂಲಕ ದೇಶದ ಎಲ್ಲೆಡೆ ಸಮಾನ ಶಿಕ್ಷಣದ ಪ್ರಸರಣ.

5. 6 ರಿಂದ 8ನೇ ತರಗತಿಯಲ್ಲಿ ವೃತ್ತಿಪರ ಕೌಶಲ್ಯ ಹಾಗೂ ಕರಕುಶಲತೆಯ ಬಗ್ಗೆ ಮಾಹಿತಿ ಹಾಗೂ ವೃತ್ತಿಪರ ಶಿಕ್ಷÀಣದ ಪರಿಚಯ.

6. ವಿದ್ಯಾರ್ಥಿಗಳ ವಿಷಯ ಗ್ರಹಿಕೆ ಮತ್ತು ಕೌಶಲ್ಯಗಳನ್ನು ಪರಿಗಣಿಸಿ ರೂಪಿಸಿದ ಮೌಲ್ಯಮಾಪನ ಪದ್ಧತಿಯ ಅಳವಡಿಕೆ.

7. ಸ್ವಾಯತ್ತ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಓಂಖಿIಔಓಂಐ ಖಿಇSಖಿIಓಉ (ಂಉಇಓಅಙ)ಯ ಮೂಲಕ ಗಣಕೀಕೃತ ಪರೀಕ್ಷೆ (ಅಔಒPUಖಿಇಖISಇಆ ಖಿಇSಖಿIಓಉ) ಹಾಗೂ ಯೋಗ್ಯತಾ (ಂPಖಿIಖಿUಆಇ) ಪರೀಕ್ಷೆಗಳಿಗೆ ಅವಕಾಶ.

8. ಎಲ್ಲಾ ಶಾಲೆಗಳಲ್ಲಿ ಸಮಗ್ರವಾಗಿ ಶಿಕ್ಷÀಕರ ಅವಶ್ಯಕತೆಯನ್ನು ಆಧರಿಸಿ ದೃಢವಾದ ಪ್ರಕ್ರಿಯೆಯ ಮೂಲಕ ಶಿಕ್ಷಕ ನೇಮಕಾತಿ.

9. ಗುತ್ತಿಗೆ ಆಧಾರಿತ ಶಿಕ್ಷಕರ ನೇಮಕಾತಿಯನ್ನು ದೇಶಾದ್ಯಂತ ನಿಲ್ಲಿಸಲಾಗುವುದು.

10. ಉತ್ತಮ ಗುಣಮಟ್ಟದ ಭೌತಿಕ ಮೂಲಭೂತ ಸೌಕರ್ಯಗಳು, ಸೌಲಭ್ಯಗಳು ಹಾಗೂ ಕಲಿಕಾ ಸಂಪನ್ಮೂಲಗಳನ್ನು ಸಾರ್ವತ್ರಿಕವಾಗಿ ಎಲ್ಲಾ ಶಾಲೆಗಳಿಗೆ ಸಮಾನಾಗಿ ನೀಡುವುದು.

11. ವಾಸ್ತವವಾಗಿ ನಿರ್ವಹಿಸಬಲ್ಲ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತವನ್ನು ಅನುಸರಿಸಲಾಗುವುದು.

12. ಈಗ ಚಾಲ್ತಿಯಲ್ಲಿರುವ ಯು.ಜಿ.ಸಿ (Uಟಿiveಡಿsiಣಥಿ ಉಡಿಚಿಟಿಣ ಅommissioಟಿ) ಎ.ಐ.ಸಿ.ಟಿ.ಇ. (ಂಟಟ Iಟಿಜiಚಿ ಅouಟಿಛಿiಟ ಜಿoಡಿ ಖಿeಛಿhಟಿiಛಿಚಿಟ ಇಜuಛಿಚಿಣioಟಿ)ಯನ್ನು ಸಂಪೂರ್ಣವಾಗಿ ರದ್ದುಪಡಿಸಿ ಉನ್ನತ ಶಿಕ್ಷಣ ಆಯೋಗ (ಊigheಡಿ ಇಜuಛಿಚಿಣioಟಿ ಅommissioಟಿ oಜಿ Iಟಿಜiಚಿ)ವನ್ನು ಸ್ಥಾಪಿಸಲಾಗುವುದು.

13. ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ವಿದೇಶಿ ಶಿಕ್ಷಣ ಸಂಸ್ಥೆಗಳಿಗೆ ಭಾಗಿಯಾಗಲು ಅನುವು ಮಾಡಿಕೊಡುವುದು.

14. 4 ವರುಷದ ಬಹುಶಿಸ್ತೀಯ ಶೈಕ್ಷಣಿಕ ಪದವಿಯನ್ನು ಮತ್ತೆ ಜಾರಿಗೊಳಿಸುವುದು. ವಿದ್ಯಾರ್ಥಿಗಳಿಗೆ ಆಗಮನ ಹಾಗೂ ನಿರ್ಗಮನದ ಆಯ್ಕೆಯನ್ನು ನೀಡಲಾಗುವುದು. 4 ವರುಷದ ಪದವಿ ಕಾರ್ಯಕ್ರಮದಲ್ಲಿ ಒಂದು ವರುಷದ ನಂತರ ಸೂಕ್ತ ಪ್ರಮಾಣೀಕರಣ ಪತ್ರವನ್ನು ಪಡೆದು ಕೆಲಸಕ್ಕೆ ಅಥವಾ ಸ್ವಉದ್ಯೋಗಕ್ಕೆ ತೆರಳಿ ಮತ್ತೆ ಬಂದು ವ್ಯಾಸಂಗ ಮುಂದುವರಿಸುವ ಅವಕಾಶವನ್ನು ಕಲ್ಪಿಸಲಾಗಿದೆ.

15. ಎಂ.ಫಿಲ್ ಪದವಿಯನ್ನು ಸ್ಥಗಿತಗೊಳಿಸಲಾಗಿದೆ. 4 ವರುಷ ಪದವಿ, 5 ವರುಷದ ಸಮಗ್ರ ಸ್ನಾತಕೋತ್ತರ ಪದವಿಯ ನಂತರ ನೇರವಾಗಿ ಪಿ.ಹೆಚ್‍ಡಿ (Phಆ) ವ್ಯಾಸಂಗಕ್ಕೆ ಸೇರಬಹುದಾಗಿದೆ.

- ಡಾ. ಪಿ.ಎನ್. ಉದಯಚಂದ್ರ, ಮುಖ್ಯಸ್ಥರು,

ವಾಣಿಜ್ಯ ವಿಭಾಗ, ಶ್ರೀ ಧ.ಮಂ. ಸ್ವಾಯತ್ತ ಕಾಲೇಜು, ಉಜಿರೆ.

(ನಾಳಿನ ಸಂಚಿಕೆ ನೋಡಿ)