ತಲಕಾವೇರಿ, ಆ. 15: ತಲಕಾವೇರಿಯಲ್ಲಿ ಸಂಭವಿಸಿದ ದುರಂತದ ಶೋಧ ಕಾರ್ಯದಲ್ಲಿ ಇಂದು ಮೂರನೇ ಮೃತದೇಹ ಪತ್ತೆಯಾಗಿದೆ. ತಲಕಾವೇರಿಯಲ್ಲಿ ಸಹಾಯಕ ಅರ್ಚಕರಾಗಿದ್ದು ವಿಕೋಪ ಸಂದರ್ಭ ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಾಣಾಚಾರ್ ಅವರ ಮನೆಯಲ್ಲಿಯೇ ತಂಗಿದ್ದ ಮೂಲತಃ ಬಂಟ್ವಾಳ ತಾಲೂಕಿನ ಕನಪ್ಪಾಡಿ ನಿವಾಸಿ ರಾಮಕೃಷ್ಣ ರಾವ್ ಹಾಗೂ ರೇಣುಕಾ ದಂಪತಿಯ ಪುತ್ರ ರವಿಕಿರಣ್ (24) ಅವರ ಮೃತದೇಹ ಘಟನಾ ಸ್ಥಳದಿಂದ ಸುಮಾರು ಒಂದು ಕಿ.ಮೀ. ಕೆಳಭಾಗದಲ್ಲಿ ಪತ್ತೆಯಾಯಿತು. ಮೃತರ ಪಾರ್ಥಿವ ಶರೀರ ಜೀರ್ಣ ಸ್ಥಿತಿಯಲ್ಲಿ ಕಂಡು ಬಂದಿದ್ದು ಅವರು ಧರಿಸಿದ್ದ ಉಂಗುರ ಮತ್ತು ಟೀ ಶರ್ಟ್‍ಗಳ ಪತ್ತೆಯಿಂದ ಗುರುತಿಸಲು ಸಾಧ್ಯವಾಯಿತು. ಸಂಜೆ ತಡವಾಗಿ ಅವರ ಕುಟುಂಬ ಸದಸ್ಯರೂ ಆಗಮಿಸಿದ್ದು ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸಿದ್ದುದು ಕಂಡು ಬಂದಿತು. ಜಿಲ್ಲಾ ಪ್ರಕೃತಿ ವಿಕೋಪ ತಂಡ, ಎನ್‍ಡಿಆರ್‍ಎಫ್, ಎಸ್‍ಡಿ ಆರ್‍ಎಫ್, ಅರಣ್ಯ, ಅಗ್ನಿಶಾಮಕ ಮತ್ತು ಪೆÇಲೀಸ್ ಇಲಾಖಾ ತಂಡಗಳು ಕಾರ್ಯಾಚರಣೆ ನಡೆಸಿದವು. ಡಿ.ವೈಎಸ್.ಪಿ. ದಿನೇಶ್ ಕುಮಾರ್ ಸ್ಥಳದಲ್ಲಿದ್ದರು.ಇನ್ನೂ ಕೂಡ ನಾರಾಯ ಣಾಚಾರ್ ಅವರ ಪತ್ನಿ ಶಾಂತ ಹಾಗೂ ಮತ್ತೊಬ್ಬ ಸಹಾಯಕ ಅರ್ಚಕ ಶ್ರೀನಿವಾಸ್ ಪಡ್ಡಿಲಾಯ ಇವರುಗಳ ಪಾರ್ಥಿವ ಶರೀರ ಸಿಗಬೇಕಾಗಿದೆ.

ಪರಿಹಾರ ಚೆಕ್ ವಿತರಣೆ

ತಲಾ ರೂ. 2.5 ಲಕ್ಷ ಪರಿಹಾರದ ಚೆಕ್ ಅನ್ನು ನಾರಾಯಣಾಚಾರ್ ಅವರ ಪುತ್ರಿಯರುಗಳಾದ ನಮಿತಾ ಹಾಗೂ ಶಾರದ ಇವರುಗಳಿಗೆ ಸಚಿವ ಸೋಮಣ್ಣ ಶನಿವಾರ ಭಾಗಮಂಡಲ ದಲ್ಲಿ ವಿತರಿಸಿದರು. ಹಾಗೆಯೇ ನಾರಾಯಣಾಚಾರ್ ಅವರ ಅಣ್ಣ ಆನಂದ ತೀರ್ಥ ಅವರು ಬ್ರಹ್ಮಚಾರಿ ಯಾಗಿದ್ದರಿಂದ ಅವರ ಸಹೋದರಿ ಸುಶೀಲಮ್ಮ ಕೆದಿಲಾಯ ಅವರಿಗೆ 5 ಲಕ್ಷ ರೂ. ಚೆಕ್ ಅನ್ನು ಸಚಿವರು ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಭಾಗಮಂಡಲದಲ್ಲಿ ನಾರಾಯಣಾ ಚಾರ್ ಅವರಿಗೆ

(ಮೊದಲ ಪುಟದಿಂದ) ಒಳ್ಳೆಯ ಹೆಸರಿತ್ತು. ತಲಕಾವೇರಿಗೆ ಆಗಮಿಸುವ ಭಕ್ತರನ್ನು ಗೌರವ, ಭಕ್ತಿಯಿಂದ ಕಾಣುತ್ತಿದ್ದರು. ಎಂದು ಸ್ಮರಿಸಿದರು.

ತಲಕಾವೇರಿಯಲ್ಲಿ ಪೂಜೆ

ಸಚಿವ ವಿ. ಸೋಮಣ್ಣ ಅವರು ತಲಕಾವೇರಿಗೆ ಭೇಟಿಯಾಗಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತಲಕಾವೇರಿಯ ಗಣಪತಿ, ಅಗಸ್ತ್ಯೇಶ್ವರ, ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.

ಶಾಸಕ ಕೆ.ಜಿ. ಬೋಪಯ್ಯ, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದ¸್ಯÀ ಸುನಿಲ್ ಸುಬ್ರಮಣಿ, ತಲಕಾವೇರಿ-ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್‍ಕುಮಾರ್, ತಹಶೀಲ್ದಾರ್ ಮಹೇಶ್ ಮತ್ತಿತರರಿದ್ದರು.

ಸಮಿತಿ ಸದಸ್ಯರು ಮತ್ತು ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಅವರು ನಾಡಿಗೆ ಸುಭಿಕ್ಷೆ ತರುವಂತಾಗಲಿ, ಕಾವೇರಿ ಮಾತೆ ಎಲ್ಲರಿಗೂ ಒಳಿತು ಮಾಡುವಂತಾಗಲಿ ಎಂದು ಪ್ರಾರ್ಥಿಸಿದರು.

ಕಾರ್ಯಾಚರಣೆ ಸ್ಥಳಕ್ಕೆ ಭೇಟಿ

ಗಜಗಿರಿ ಬೆಟ್ಟದಲ್ಲಿ ಭೂಕುಸಿತದ ಸ್ಥಳದಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಸಚಿವ ಸೋಮಣ್ಣ್ದ ಅಧಿಕಾರಿಗಳು, ಸಂಸದರು ಮತ್ತು ಶಾಸಕರೊಂದಿಗೆ ತೆರಳಿ ವೀಕ್ಷಿಸಿದರು.

ಇನ್ನೂ ಇಬ್ಬರ ಮೃತದೇಹ ಪತ್ತೆಹಚ್ಚಬೇಕಿದ್ದು, ಶಾಸಕ ಕೆ.ಜಿ. ಬೋಪಯ್ಯ ಹಾಗೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ನುಡಿದರು.

ಸಚಿವರು ಮತ್ತಿತರರು ಭಾಗಮಂಡಲದಲ್ಲಿ ಶ್ರೀ ಭಗಂಡೇಶ್ವರ, ಮಹಾಗಣಪತಿ, ವಿಷ್ಣು ಹಾಗೂ ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ನಂತರ ನಾಡಿಗೆ ಸುಭಿಕ್ಷೆ ದೊರೆಯಲಿ ಎಂದು ಈಡುಗಾಯಿ ಒಡೆದರು. (ಚಿತ್ರ ವರದಿ: ಕೆ.ಡಿ. ಸುನಿಲ್)