ಮಡಿಕೇರಿ, ಆ. 16: ಮಡಿಕೇರಿಯ ಆಝಾದ್ ನಗರದ ರಸ್ತೆಯ ಬಳಿ ಚರಂಡಿ ಇಲ್ಲದ ಕಾರಣ ಮಳೆ ನೀರು ಹರಿದು ರಸ್ತೆ ಹಾನಿಯಾಗಿ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಮಡಿಕೇರಿಯ ಯೂತ್ ಕಮಿಟಿ ಸದಸ್ಯರು ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಪಡಿಸಿದರು. ಯೂತ್ ಕಮಿಟಿಯ ಅಧ್ಯಕ್ಷ ಜೈನುಲ್ ಆಬಿದ್, ಉಪಾಧ್ಯಕ್ಷ ಶರಫತ್ ನೇತೃತ್ವ ವಹಿಸಿದ್ದರು.