ಶೌನಕಾದಿ ಋಷಿ ಮುನಿಗಳು ಹೇಳುತ್ತಾರೆ:-ಕರುಣಾಸಾಗರನಾದ ಸೂತನೇ, ನೀನು ಹೇಳಿದ ಸರ್ವ ವಿಷಯವನ್ನೂ ಕೇಳಿದೆವು. ಆದರೆ, ಕಾವೇರಿಯು ಅವರಿಗೆ ಕೊಟ್ಟ ವರಗಳ ವಿಷಯವನ್ನು ಮಾತ್ರ ಹೇಳಲಿಲ್ಲ. ಅದನ್ನು ದಯೆಯಿಟ್ಟು ಹೇಳಬೇಕು. ಈ ರೀತಿ ಮುನಿಗಳು ಕುತೂಹಲದಿಂದ ಕೇಳಿದಾಗ ಸೂತನು ವರ್ಣಿಸುತ್ತಾನೆ. ತಂದೆ ಚಂದ್ರವರ್ಮನು ತನಗೆ ಪಟ್ಟಾಭಿಷೇಕ ಮಾಡಿ ಸನ್ಯಾಸಿಯಾಗಿ ತೆರಳಿದ ಬಳಿಕ ಆತನ ಪ್ರಥಮ ಪುತ್ರ ದೇವಕಾಂತನು ತನ್ನ ತಂದೆ ಹೇಳಿದ ಪ್ರತೀ ಹಿತನುಡಿಗಳನ್ನೂ ಗಮನದಲ್ಲ್ಲಿರಿಸಿಕೊಳ್ಳುತ್ತಾನೆ. ತಂದೆಯ ಉಪದೇಶವನ್ನು ಪಾಲಿಸಲು ಪ್ರಾರಂಭಿಸುತ್ತಾನೆ. ತನ್ನ ತಂದೆ ಸೂಚಿಸಿದಂತೆ ವಿವೇಕತನದಲ್ಲಿ ವ್ಯವಹರಿಸುತ್ತಾನೆ. ಇದರಿಂದಾಗಿ ಮಹಾತೇಜಸ್ವಿಯಾಗಿ ವೃದ್ಧಿಗೊಳ್ಳುತ್ತಾನೆ. ರಾಜ್ಯಭಾರದ ಎಲ್ಲ ಜವಾಬ್ದಾರಿಯನ್ನೂ ಶಿರಸಾ ವಹಿಸಿಕೊಳ್ಳುತ್ತಾನೆ.
ಉಪಾಸಯನ್ಸದಾ ದೇವೀಂ ಮಹಾಮಾಯಾಂ ಮಹೇಶ್ವರೀಂ
ಸರ್ವೇಶ್ವರಂ ಮಹೇಶಾನಂ ಮಹಾಭಕ್ತಿ ಸಮನ್ವಿತಃ
ಅಂಬಿಕಾಯಾಂ ಮಹಾದೇವ್ಯಾಃ ಕಾವೇರೀತ್ಯಭಿಧಾನತಃ
ನಿರ್ಗಮಂ ತೀರ್ಥರೂಪೇಣ ಕಾಂಕ್ಷನ್ನಿತ್ಯಂ ಪದೇ ಪದೇ
ಅತಿ ಭಕ್ತಿಯಿಂದ ಪೂಜ್ಯಳೂ, ಮಹಾಮಾಯೆಯೂ ಆದ ಪಾರ್ವತಿಯನ್ನೂ ಸರ್ವೇಶ್ವರನಾದ ಈಶ್ವರನನ್ನೂ, ಸದಾ ಪೂಜಿಸುತ್ತಲೂ, ಅನೇಕ ಧರ್ಮ ಕಾರ್ಯಗಳನ್ನು ಮಾಡುತ್ತಲೂ ರಾಜ್ಯಭಾರ ಮಾಡುತ್ತಾನೆ. ತನ್ನ ತಂದೆ ಚಂದ್ರವರ್ಮನು ಮೊದಲೇ ಸೂಚಿಸಿದ್ದಂತೆ ಪಾರ್ವತಿ ದೇವಿಯು ಕಾವೇರಿಯಾಗಿ ರೂಪು ತಾಳಿ ತೀರ್ಥ ರೂಪದಿಂದ ಹೊರಡುವದನ್ನು ಪದೇ ಪದೇ ನಿರೀಕ್ಷಿಸುತ್ತಿದ್ದನು. ತನ್ನಂತೆಯೇ ಜ್ಞಾನಿಗಳಾದ ಇತರ ಹತ್ತು ಮಂದಿ ಸಹೋದರರ ಒಗ್ಗಟ್ಟಿನ ಬಲದಿಂದ ತನ್ನ ದೇಶದ ಪ್ರಜೆಗಳನ್ನು ನಿಷ್ಪಕ್ಷಪಾತವಾಗಿ ಪರಿಪಾಲಿಸುತ್ತಿದ್ದನು. ಉತ್ತಮ ರಾಜ್ಯಭಾರದಿಂದ ದೇಶದ ಜನತೆಯ ಪ್ರೀತಿಗೆ ಪಾತ್ರನಾಗಿದ್ದನು. ಒಂದು ದಿನ ಸೂರ್ಯನು ತುಲಾರಾಶಿಯನ್ನು ಪ್ರವೇಶಿಸುತ್ತಿರುವಾಗ ಪಾವನವೂ, ಮಹಾಪಾಪನಾಶಕರವೂ ಆದಂತಹ ಸಂಕ್ರಮಣ ಕಾಲ ಸನ್ನಿಹಿತವಾಯಿತು. ಸರ್ವಸ್ವರೂಪಳೂ, ಸರ್ವೇಶ್ವರಿಯೂ, ಸರ್ವತಂತ್ರ ಸ್ವತಂತ್ರಳೂ ಆದ ಪಾರ್ವತಿಯು ತಾನು ಈ ಹಿಂದೆ ಚಂದ್ರವರ್ಮ ರಾಜನಿಗೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸುವ ಪುಣ್ಯ ಕಾಲ ಬಂದೊದಗಿತು. ತನ್ನ ವಚನವನ್ನು ಈಡೇರಿಸಲು ದೃಢ ನಿಶ್ಚಯ ಹೊಂದಿದಳು. ತೀರ್ಥ ರೂಪಧಾರಿಣಿಯಾಗಿ ಸಮುದ್ರಕ್ಕೆ ಪ್ರವಹಿಸಲು ಅಣಿಯಾದಳು. ತಾನು ನದೀ ರೂಪವಾಗಿ ಹೊರಡುವ ಎರಡು ದಿನಗಳ ಮುಂಚಿತವಾಗಿ ಚಂದ್ರವರ್ಮನ ಪುತ್ರ ಕ್ರೋಡ ದೇಶದ ಅರಸನಾದ ದೇವಕಾಂತನಿಗೆ ಪಾರ್ವತೀ ದೇವಿ ಸುಸ್ವಪ್ನ ರೂಪದಲ್ಲಿ ಕಾಣಿಸಿಕೊಂಡಳು. ಸ್ವಪ್ನರೂಪದಲ್ಲಿ ಆಕೆ ದೈವಿಕ ವಾಣಿ ಮೂಲಕ ಹೀಗೆ ಹೇಳಿದಳು; “ಮಹಾಭಾಗ್ಯವಂತನಾದ ಹಾಗೂ ನನ್ನ ಕುವರಿಯ( ಚಂದ್ರವರ್ಮ ರಾಜನಿಗೆ ಸಂತಾನಕ್ಕೋಸ್ಕರ ತಾನು ಸೃಷ್ಟಿ ಮಾಡಿ ನೀಡಿದ ಆದಿಮ ಸಂಜಾತೆ ಕನ್ಯೆ)ಕಣ್ಣುಗಳಿಗೆ ಆನಂದದಾಯಕನೂ, ನನ್ನ ಅನುಗ್ರಹಕ್ಕೆ ಪಾತ್ರನೂ, ಭಕ್ತಾಗ್ರೇಸರನೂ ಆದ ಪುತ್ರನೇ, ನಾನು ಅನುಗ್ರಹಿಸಲು ಬಂದ ಪಾರ್ವತಿಯೆಂದು ತಿಳಿ. ಸಹೋದರ ವರ್ಗದೊಡನಿರುವ ನಿನಗೆ ಕಲ್ಯಾಣವಾಗಲಿ. ನಾನು ನಾಡಿದ್ದು ಸಂಕ್ರಮಣ ಪುಣ್ಯ ಕಾಲದಲ್ಲಿ ತೀರ್ಥರೂಪಿಣಿಯಾಗಿ ಹೊರಡುವೆನು. ನನ್ನ ಪುತ್ರಿಯ ವಂಶದಲ್ಲಿ ಜನಿಸಿದ ಸರ್ವರಿಗೂ ನಾನು ತೀರ್ಥರೂಪದಿಂದ ಹೊರಡುವ ವೇಳೆಯಲ್ಲಿ ಅನೇಕ ವರಗಳನ್ನು ಕೊಡುವೆನು. ಅದರಿಂದ ನೀನೂ ಸೇರಿದಂತೆ ನಿನ್ನ ಪರಿವಾರದವೆಲ್ಲರೂ ಜಾಗ್ರತೆಯಾಗಿ ಹೊರಟು ಬಲಮುರಿಯಲ್ಲಿ ನಿಲ್ಲಿ. ಸ್ವಲ್ಪ ಕಾರ್ಯದ ನಿಮಿತ್ತವಾಗಿ ನಾನು ಒಂದು ಕ್ಷಣ ಅಲ್ಲಿ ನಿಲ್ಲುವೆನು ಎಂದು ಹೇಳಿ ದೇವಕಾಂತ ರಾಜನ ಸ್ವಪ್ನದಿಂದ ಪಾರ್ವತಿ ಅದೃಶ್ಯಳಾದಳು. ಬಳಿಕ ಬುದ್ಧಿಶಾಲಿಯಾದ ದೇವಕಾಂತನು ಬೆಳಿಗ್ಗೆ ಹೊತ್ತಿಗೆ ಮುಂಚೆ ಎದ್ದು ಈ ವಿಷಯವನ್ನು ಹರ್ಷದಿಂದ ಎಲ್ಲ ಸಹೋದರರಿಗೂ ಇತರ ಜನರಿಗೂ ತಿಳಿಸಿದನು. ದೂರದೂರುಗಳಲ್ಲಿರುವ ಬಂಧು ಬಾಂಧವರು ಬರುವಂತೆ ಕರೆ ನೀಡಿದನು. ಅಲ್ಲದೆ, ಹದಿನೆಂಟು ತಮಟೆಗಳನ್ನು ಹೊಡೆಯಲು ಮತ್ತು ಕೊಂಬನ್ನು ಊದಲು ಭೃತ್ಯರಿಗೆ ಆಜ್ಞಾಪಿಸಿದನು. ಆ ಧ್ವನಿಯನ್ನು ಕೇಳಿದೊಡನೆ ಭಾರೀ ಸಂಭ್ರಮದಿಂದ ಮಕ್ಕಳಾದಿಯಾಗಿ ವಯೋವೃದ್ಧರವರೆಗೂ ಪ್ರಜೆಗಳು ಬಲಮುರಿಯಲ್ಲಿ ಬಂದು ಕೊಡವರ ಕುಲದೇವತೆ: ಹಿಂದೂಗಳ ಆರಾಧ್ಯ ದೈವ
ಅನೇಕ ಆಧಾರಗಳ ಪ್ರಕಾರ ಕಾವೇರಿ ಕೊಡವ ಜನಾಂಗದ ಕುಲದೇವಿ. ಜೊತೆಗೆ ಆಕೆ ದೇಶದ ಸರ್ವ ಹಿಂದೂಗಳ ಆರಾಧ್ಯ ದೈವವೂ ಹೌದು. ಜಾತಿ ಮತ ರಾಹಿತ್ಯವಾಗಿ ದಕ್ಷಿಣ ಭಾರತದ ಜನತೆಗೆ ಆಕೆ ಅನ್ನದಾತೆ, ವಿದ್ಯುತ್ ಬೆಳಕು ದಾತೆ.
ಸ್ಕಂದ ಪುರಾಣಾಂತರ್ಗತ ಶ್ರೀ ಕಾವೇರಿ ಮಹಾತ್ಮೈ ಪ್ರಕಾರ ಪಾರ್ವತಿಯ ಅನುಗ್ರಹದಿಂದ ಜನಿಸಿದ ಆದಿಮ ಸಂಜಾತೆ ಯುವತಿಯಲ್ಲಿ ಚಂದ್ರವರ್ಮನು ಹನ್ನೊಂದು ಮಂದಿ ಪುತ್ರರನ್ನು ಪಡೆದು ಆ ಪುತ್ರರಿಗೂ ವಿದರ್ಭ ರಾಜನ ಆದಿಮ ಸಂಜಾತೆ ಯುವತಿಯರನ್ನು ವಿವಾಹ ಮಾಡಿಕೊಟ್ಟ ಬಳಿಕ ಚಂದ್ರವರ್ಮನ ಕರ್ತವ್ಯ ಮುಗಿಯುತ್ತದೆ. ದುಷ್ಟರನ್ನು ಸಂಹರಿಸಿ ರಾಜ್ಯದಲ್ಲಿ ಧರ್ಮವನ್ನು ಸ್ಥಾಪಿಸಿ ಚಂದ್ರವರ್ಮನು ವಿರಕ್ತನಾಗುತ್ತಾನೆ, ಆತನು ತಮ್ಮ ಕುಲದೇವಿಯಾಗಿ ಪಾರ್ವತಿಯು ಕಾವೇರಿಯಾಗಿ ಭುವಿಗೆ ಆಗಮಿಸುತ್ತಾಳೆ ಎನ್ನುವ ಮುನ್ಸೂಚನೆಯನ್ನು ತನ್ನ ಪುತ್ರ ದೇವಕಾಂತ ಮತ್ತಿತರ ದಶ ಪುತ್ರರಿಗೆ ನೀಡುತ್ತಾನೆ. ಕಾವೇರಿಯ ಪೂಜೆ ತನ್ನ ಕುಲಬಾಂಧವರಿಗೆ ಅತ್ಯಗತ್ಯವಾಗಿದೆ ಎಂದು ಸ್ಪಷ್ಟವಾಗಿ ತಿಳಿಸುತ್ತಾನೆ. ಇದರಿಂದಾಗಿ ಚಂದ್ರವರ್ಮನನ್ನು ಕೊಡವ ಜನಾಂಗದ ಮೂಲ ಪುರುಷ ಅಂದರೆ ಪ್ರಪಿತಾಮಹ ಎಂದು ಭಾವಿಸಲಾಗಿದೆ. ಕಾವೇರಿ ಪುರಾಣದ ಕೊನೆಯ ಭಾಗ ಮುಂದಿನ ವಾರದಲ್ಲಿ ಪ್ರಕಟಗೊಂಡು ಮುಕ್ತಾಯಗೊಳ್ಳಲಿದ್ದು ಅದರಲ್ಲಿಯೂ ಕೊಡವರ ಕುಲದೇವತೆ ಎನ್ನುವದಕ್ಕೆ ಪುರಾವೆಗಳಿವೆ. ಚಂದ್ರವರ್ಮನ ಪುತ್ರ ದೇವಕಾಂತನು ಕೂಡ ಕೊಡವ ಜನಾಂಗದ ಆದ್ಯ ಪಿತನೆಂದು ಕಂಡುಬರುತ್ತದೆ. ಆದರೆ, ಲೇಖಕನು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವದಷ್ಟೇ ಹೊರತು ಅಂತಿಮ ಸಂಶೋಧನಾತ್ಮಕವೆಂದು ಯಾರೂ ಭಾವಿಸದಿರಲಿ. ಪುರಾಣ ಕತೆಗಳ ಪುರಾವೆಗಳ ಆಧಾರದಲ್ಲಿ ಮಾತ್ರ ಇದನ್ನು ವಿಮರ್ಶಿಸಲಾಗಿದೆ. ಏಕೆಂದರೆ ಈ ಕುರಿತು ಈ ಹಿಂದೆಯೂ ಸಾಕಷ್ಟು ಚರ್ಚೆಗಳಾಗಿವೆ. ಮುಂದಿನ ವಾರ ಕಾವೇರಿ ಪುರಾಣದಲ್ಲಿರುವ ಎಲ್ಲ ಮಾಹಿತಿ ಪ್ರಕಟಗೊಳ್ಳಲಿದೆ.
ಕೊಡಗು ಜಿಲ್ಲೆಯೂ ಸೇರಿದಂತೆ ದೇಶದ ಸಮಗ್ರ ಹಿಂದೂ ಧರ್ಮೀಯರಿಗೆ ಕಾವೇರಿ ಆರಾಧ್ಯ ದೈವ ಎಂಬದೂ ಸತ್ಯ. ಹಿಂದೂಗಳ ಪ್ರತೀ ಸಂಕಲ್ಪದಲ್ಲಿ “ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು” ಎಂದು ಪಠಿಸುವದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಕಾವೇರಿ ಕೊಡವರ ಕುಲ ದೇವತೆ ಎನ್ನುವದನ್ನು ಇನ್ನಿತರ ಹಲವು ಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ. ದಿ. ಡಿ.ಎನ್ ಕೃಷ್ಣಯ್ಯ ಅವರು ಬರೆದ “ಕೊಡಗಿನ ಇತಿಹಾಸ”, ದಿ.ಹರದಾಸ ಅಪಚ್ಚ ಕವಿ ವಿರಚಿತ “ ಶ್ರೀ ಕಾವೇರಿ ನಾಟಕ”, “ಕೊಡಗಿನ ಕನ್ನಡ ಗೆಝೆಟಿಯರ್”, ದಿ.ಪರದಂಡ ಚಂಗಪ್ಪ ಅವರು ಬರೆದ “ಕೊಡಗಿನ ಮೂಲ ನಿವಾಸಿಯರ ಪುರಾಣ ಸಂಸ್ಕøತಿ”, ದಿ.ಎದುರ್ಕಳ ಶಂಕರ ನಾರಾಯಣ ಭಟ್ ವಿರಚಿತ “ಶ್ರೀ ಕಾವೇರಿ ವೈಭವ” , ಡಾ. ಕಾವೇರಿ ಪ್ರಕಾಶ್ ಅವರ “ಕೊಡವರ ಸಂಸ್ಕಾರಗಳು”, ದಿ.. ನಡಿಕೇರಿಯಂಡ ಚಿಣ್ಣಪ್ಪ ಅವರ “ಪಟ್ಟೋಲೆ ಪಳಮೆ”, ಬ್ರಿಟಿಷ್ ಕಾಲದ “ಗೆಝೆಟಿಯರ್ ಆಫ್ ಕೂರ್ಗ್”, ಸೂರ್ಯನಾಥ ಯು. ಕಾಮತ್ ಸಂಪಾದಕತ್ವದ “ಕರ್ನಾಟಕ ರಾಜ್ಯ ಗೆಝೆಟಿಯರ್” - ಹೀಗೆ ಇನ್ನೂ ಹತ್ತು ಹಲವು ಗ್ರಂಥಗಳಲ್ಲಿ ಕಾವೇರಿಯು ಕೊಡವರ ಕುಲದೇವತೆ ಎನ್ನುವ ಕುರಿತು ಉಲ್ಲೇಖವಿದೆ. (ಮುಂದುವರಿಯುತ್ತದೆ)ಸೇರಿದರು. ತಮ್ಮ ಪತ್ನಿಯರೊಂದಿಗೆ ದೇವಕಾಂತ ಮೊದಲಾದವರೂ ತೆರಳಿದರು. ಅನಂತರ ಪರಾತ್ಪರಳಾದ ಪಾರ್ವತಿಯು ಕಾವೇರಿಯೆಂಬ ಹೆಸರಿನಿಂದ ಸಹ್ಯಾದ್ರಿ ಶಿಖರದಲ್ಲಿರುವ ಕುಂಡಿಕೆಯಿಂದ ನದೀ ರೂಪದಲ್ಲಿ ಹೊರಟಳು. ಅವಳನ್ನು ಅಗಸ್ತ್ಯರ ಶಿಷ್ಯರು ಅಡ್ಡಗಟ್ಟಿದಾಗ ಭೂಮಿಯೊಳಗೆ ಹೊರಟಳು. ಹೀಗೆ ಹೊರಟ ಅವಳನ್ನು ಕೆಲವರು ಭಾಗಮಂಡಲದಲ್ಲಿ ಕಂಡರು. ಇನ್ನು ಕೆಲವರು ಅದರಿಂದಾಚೆ ಕಂಡರು. ಅವಳ ಮಗಳ ತನಯರಾದ ದೇವಕಾಂತಾದಿಗಳು ಬಲಮುರಿಯಲ್ಲಿ ಅವಳನ್ನು ಕಂಡರು. ಬಲಮುರಿಯಲ್ಲಿ ಅವಳು ತನ್ನ ಮೊಮ್ಮಕ್ಕಳನ್ನು ನೋಡಿದೊಡನೆ ಸಂತಸದಿಂದ ಅತಿ ವಿಸ್ತಾರವನ್ನೈದಿದಳು. ಆಕೆಯ ದರ್ಶನವಾದೊಡನೆ ದೇವಕಾಂತಾದಿ ಸಮಸ್ತ ಜನರೂ ಅತ್ಯಂತ ಹರ್ಷಿತರಾದರು. ಅನೇಕ ಜನ್ಮಗಳ ಭಾಗ್ಯ ಈಗ ಲಭಿಸಿತು ಎಂದು ಭಾವಿಸಿದರು. ಸಂತೋóಷಾಧಿಕ್ಯದಿಂದ ನೇತ್ರಗಳು ತೋಯಲ್ಪಟ್ಟು ಹರ್ಷಾಶ್ರುವಿನ ಕಂಬನಿ ತುಂಬಿ ಬಂದಿತು. ತಮ್ಮ ಶರೀರವನ್ನು ಬಾಗಿಸಿ ನಮ್ರತೆಯಿಂದ ಕಾವೇರಿಯನ್ನು ಸ್ತುತಿಸಲಾರಂಭಿಸಿದರು. ಕೈಮುಗಿದು ಹೀಗೆ ಪ್ರಾರ್ಥಿಸಿದರು:-
ಜಯ ದೇವಿ ಮಹೇಶಾನೇ ಜಯ ಸರ್ವೇಶ್ವರೇಶ್ವರಿ
ಜಯ ಗಂಗಾದ್ಯನೇಕೈಕ ಪುಣ್ಯತೀರ್ಥಾಶ್ರಯೇ ಪರೇ
ಜಯ ಶಂಕರ ಸರ್ವಸ್ವೇ ಜಯ ವಿಷ್ಣುಪದಾಶ್ರಯೇ
ಜಯ ಭಕ್ತಜನೋದ್ಧಾರೇ ಜಯ ಸರ್ವಾರ್ಥಸಿದ್ಧಿದೇ
ಜಯ ಜನ್ಮಜರಾಸಂಸ್ಥೋನ್ಮೂಲ ನಾಬದ್ಧ ಕಂಕಣೇ
ಜಯ ಸರ್ವಜಗತ್ಸøಷ್ಟಿಸ್ಥಿತಿಸಂಸ್ಥಾಧಿಕಾರಣೇ
ಜಯ ಬ್ರಹ್ಮಾದಿಕೀಟಾಂತಮೋಹನೇ ವಿಶ್ವ ಮಂಗಲೇ
ಜಯ ದೇವಿ ಪರಬ್ರಹ್ಮಗೋಚರಜ್ಞಾನದಾಯಿನಿ