*ಕೊಡ್ಲಿಪೇಟೆ, ಆ. 16: ಕೊರೊನಾ ವೈರಸ್ ವ್ಯಾಪಕವಾಗಿ ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರಕಾರಗಳೊಂದಿಗೆ ಸ್ಥಳೀಯಾಡಳಿತ ಕೂಡ ಹೆಚ್ಚಿನ ಜಾಗೃತಿ ಮೂಡಿಸುತ್ತಿದ್ದು, ಹಲವಷ್ಟು ನಿಯಮಾವಳಿಗಳನ್ನು ಜಾರಿಗೆ ತರುತ್ತಿದೆ. ಆದರೂ ಸಹ ಸಾರ್ವಜನಿಕರು ವೈರಸ್ ಬಗ್ಗೆ ಮುಂಜಾಗ್ರತೆಯನ್ನು ಕೈಗೊಳ್ಳದೇ ನಿರ್ಲಕ್ಷ್ಯ ಧೋರಣೆ ತಳೆಯುತ್ತಿದ್ದಾರೆ. ಇಂತಹ ಮಂದಿಗೆ ಕೊಡ್ಲಿಪೇಟೆಯಲ್ಲಿಂದು ದಂಡ ವಿಧಿಸಿ ಬಿಸಿ ಮುಟ್ಟಿಸಲಾಯಿತು.
ಕೊಡ್ಲಿಪೇಟೆ ಪಟ್ಟಣದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಸಾರ್ವಜನಿಕರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದಂಡ ವಿಧಿಸಿದರು. ಸರ್ಕಾರದ ನಿಯಮದಂತೆ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಹಲವಷ್ಟು ಮಂದಿ ನಿಯಮ ಮೀರುತ್ತಿದ್ದಾರೆ. ಈ ಹಿನ್ನೆಲೆ ಮಾಸ್ಕ್ ಧರಿಸದವರಿಗೆ ತಲಾ 100 ರೂಪಾಯಿ ದಂಡ ವಿಧಿಸಲಾಗುತ್ತಿದೆ ಎಂದು ಅಭಿವೃದ್ಧಿ ಅಧಿಕಾರಿ ಹರೀಶ್ ತಿಳಿಸಿದರು. ಈ ಸಂದರ್ಭ ಗ್ರಾ.ಪಂ. ಬಿಲ್ ಕಲೆಕ್ಟರ್ ದೀಪು, ಕೊಡ್ಲಿಪೇಟೆ ಪೆÇಲೀಸ್ ಉಪ ಠಾಣೆಯ ಸಿಬ್ಬಂದಿಗಳಾದ ಧನಂಜಯ್, ವಿನೋದ್ ಅವರುಗಳು ಉಪಸ್ಥಿತರಿದ್ದರು.