ಮಡಿಕೇರಿ, ಆ. 16: ಜಿಲ್ಲೆಯಲ್ಲಿ ಹೊಸದಾಗಿ 27 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 978 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 686 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಒಟ್ಟು 12 ಮಂದಿ ಸಾವನ್ನಪ್ಪಿದ್ದು, 280 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 73 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 107 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ ಹಾಗೂ 100 ಮಂದಿ ಹೋಮ್ ಐಸೋಲೇಷನ್‍ನಲ್ಲಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 277 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 40 ವರ್ಷದ ಪುರುಷ, ಮದೆಯ 22 ವರ್ಷದ ಪುರುಷ, ಕುಶಾಲನಗರ ನಿಜಾಮುದ್ದೀನ್ ಲೇಔಟಿನ 14 ವರ್ಷದ ಬಾಲಕಿ ಮತ್ತು 70 ವರ್ಷದ ಪುರುಷ, ವೀರಾಜಪೇಟೆಯ ಮೀನುಪೇಟೆಯ ಮಲಬಾರ್ ರಸ್ತೆಯ 35 ವರ್ಷದ ಮಹಿಳೆ ಮತ್ತು 15 ವರ್ಷದ ಬಾಲಕ, ಕೂಡಿಗೆ ಮಸೀದಿ ಬಳಿಯ 49 ವರ್ಷದ ಮಹಿಳೆ, ಸೋಮವಾರಪೇಟೆ ಹೊಸ ಬಡಾವಣೆಯ ಎಂ.ಜಿ ಬ್ಲಾಕಿನ 50 ವರ್ಷದ ಮಹಿಳೆ, ಸಿದ್ದಾಪುರದ ಕರಡಿಗೋಡುವಿನ ಚಿಕ್ಕಂದಳ್ಳಿ ಪೈಸಾರಿಯ 19 ವರ್ಷದ ಮಹಿಳೆ, ಮಡಿಕೇರಿ ಕೆ.ನಿಡುಗಣೆಯ 42 ವರ್ಷದ ಪುರುಷ,
ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 27 ವರ್ಷದ ಪುರುಷ, ಮಡಿಕೇರಿ ಪತ್ರಿಕಾ ಭವನ ಬಳಿಯ 49 ವರ್ಷದ ಪುರುಷ, ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 70 ವರ್ಷದ ಪುರುಷ, ಜೋಡುಪಾಲದ 6 ತಿಂಗಳ ಮಗು, ಶನಿವಾರಸಂತೆ ಮುಖ್ಯರಸ್ತೆಯ 40 ವರ್ಷದ ಮಹಿಳೆ, 15 ವರ್ಷದ ಬಾಲಕಿ, 78 ವರ್ಷದ ಮಹಿಳೆ, ಸುಂಟಿಕೊಪ್ಪ ಜ್ಯೂಸ್ ಫ್ಯಾಕ್ಟರಿ ಬಳಿಯ ಮಧುರಮ್ಮ ಬಡಾವಣೆಯ 24 ವರ್ಷದ ಪುರುಷ, ಸುಂಟಿಕೊಪ್ಪ ಕೆಇಬಿ ಬಳಿಯ 32 ವರ್ಷದ ಪುರುಷ, ವೀರಾಜಪೇಟೆ ಕಡಂಗಮರೂರು ಗ್ರಾಮದ 55 ವರ್ಷದ ಮಹಿಳೆ, ಗೋಣಿಕೊಪ್ಪ ಮುಖ್ಯ ರಸ್ತೆಯ ವಿನಾಯಕ ಕಾಫಿ ವಕ್ರ್ಸ್ ಬಳಿಯ 63 ವರ್ಷದ ಮಹಿಳೆ ಮತ್ತು 38 ವರ್ಷದ ಪುರುಷ, ವೀರಾಜಪೇಟೆ ಪೂಜೆಕಲ್ಲು ಕೆಫೆ ಬಳಿಯ 60 ವರ್ಷದ ಪುರುಷ, 14 ವರ್ಷದ ಮಹಿಳೆ ಮತ್ತು 65 ವರ್ಷದ ಪುರುಷ, ನೆಲ್ಲಿಹುದಿಕೇರಿಯ 55 ವರ್ಷದ ಮಹಿಳೆ, ಸಿದ್ದಾಪುರ ಬಿಬಿಟಿಸಿ ತೋಟದ 23 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.