ಪೆÇನ್ನಂಪೇಟೆ, ಆ. 16: ಪೆÇನ್ನಂಪೇಟೆ ವ್ಯಾಪ್ತಿಯಲ್ಲಿ ಸ್ವಲ್ಪ ಬಿಡುವು ನೀಡಿದ್ದ ಮಳೆ ಕಳೆದೆರಡು ದಿನಗಳಿಂದ ಮತ್ತೆ ಜೋರಾಗಿದ್ದು, ಶನಿವಾರ ರಾತ್ರಿ ಸುರಿದ ಮಳೆಗೆ ಪೆÇನ್ನಂಪೇಟೆ 4 ನೇ ವಿಭಾಗದ ಶಿವಕಾಲೋನಿಯ ವೇದಾವತಿ ಎಂಬುವವರ ಮನೆ ಬಹುತೇಕ ಕುಸಿದು ಬಿದ್ದಿದ್ದು, ಹಾನಿಗೊಳಗಾಗಿದೆ. ಹಿಂಭಾಗದ ಗೋಡೆಗಳು ಕುಸಿದಿದ್ದು, ನೂರಾರು ಹೆಂಚುಗಳು ಹೊಡೆದುಹೋಗಿವೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಅಣ್ಣೀರ ಹರೀಶ್ ಭೇಟಿ ನೀಡಿ ಪರಿಶೀಲಿಸಿ ಪೆÇನ್ನಂಪೇಟೆ ಗ್ರಾಮ ಪಂಚಾಯಿತಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.