ಬಾಳೆಲೆ, ಆ. 16: ಬಾಳೆಲೆ ವಿಭಾಗದ ನಿಟ್ಟೂರು, ಕಾರ್ಮಾಡು, ಕೊಟ್ಟಗೇರಿ, ದಾಳಿಂಬೆ, ವಡ್ಡರಮಾಡು ಭಾಗಕ್ಕೆ ನಿರಂತರ ಕಳೆದ 15 ದಿನಗಳಿಂದ ವಿದ್ಯುತ್ ಸಂಪರ್ಕ ವಿಲ್ಲದೆ ಸಮಸ್ಯೆ ಮುಂದುವರಿದಿದೆ. ಈ ನಿಟ್ಟಿನಲ್ಲಿ ಬಾಳೆಲೆ ಕಿರಿಯ ಅಭಿಯಂತರರನ್ನು ನಿರಂತರ ಸಂಪರ್ಕಿಸಿದರರೀ ಅಭಿಯಂತರ ಮನುಕುಮಾರ್ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಕೇವಲ ಆಶ್ವಾಸನೆ ನೀಡುತ್ತಿದ್ದು, ಸಾರ್ವಜನಿಕರ ದೂರವಾಣಿ ಸ್ವೀಕರಿಸುವುದಿಲ್ಲ .ಬಿದ್ದ ಮರಗಳನ್ನು ಮತ್ತು ಮುರಿದ ಕೊಂಬೆಗಳನ್ನು ಗ್ರಾಮಸ್ಥರೇ ತೆರವುಗೊಳಿಸಿದ್ದಾರೆ.
ಸಿಬ್ಬಂದಿ ಗಳನ್ನು ಗ್ರಾಮವಾರು ಸರಿಯಾಗಿ ನಿಯೋಜನೆ ಮಾಡಿದ್ದಲ್ಲಿ ಸಂಪರ್ಕ ಸಾಧ್ಯವಾಗುತಿತ್ತು. ಅಗತ್ಯ ವಿರುವೆಡೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಿ ವಿದ್ಯುತ್ ಪೂರೈಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ನಿಟ್ಟೂರು ಗ್ರಾಮದಲ್ಲಿ ಇರುವ ಏಲ್ಲಾ ಗಿರಿಜನ ಹಾಡಿಗಳು ಮತ್ತು ಕಾಲೋನಿಗಳು ಪಂಚಾಯಿತಿ ನೀರು ಪೂರೈಕೆಯನ್ನು ಅವಲಂಬಿಸಿದೆ. ಇವರೆಲ್ಲರೂ ಈಗ ಮಳೆ ಮತ್ತು ತೋಡು, ಬಾವಿ ನೀರನ್ನು ಉಪಯೋಗಿಸುತ್ತಿದ್ದು ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ.
ಜೊತೆಗೆ ಈ ಭಾಗದ ಬಡ ವರ್ಗದ ವಿದ್ಯಾರ್ಥಿಗಳ ಪೆÇೀಷಕರು ಸ್ಮಾರ್ಟ್ ಪೆÇೀನ್ ಖರೀದಿಸಿ ಕೊಡಲು ಸಾಧ್ಯವಾಗದೆ ಇತ್ತ ಚಂದನ ವಾಹಿನಿ ಮೂಲಕ ಪಾಠ ಪ್ರವಚನ ಕೇಳಲು ಸಾಧ್ಯವಾಗದೆ ವಿದ್ಯಾಬ್ಯಾಸದಿಂದ ವಂಚಿತರಾಗಿದ್ದಾರೆ. ನಿಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಹೆಚ್ಚು ವರಿ ಸಿಬ್ಬಂದಿ ಬಳಸಿಕೊಂಡು ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಅಗಬೇಕು ಮತ್ತು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಸಾರ್ವಜನಿಕರ ದೂರನ್ನು ಆಲಿಸಬೇಕೆಂದು ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ಹಾಗೂ ಇತರರು ಆಗ್ರಹಿಸಿದ್ದಾರೆ.