ಕುಶಾಲನಗರ, ಆ. 16: ಸುಂಟಿಕೊಪ್ಪ ಹೋಬಳಿಯ ಕಾನ್‍ಬೈಲ್, ಬೈಚನಹಳ್ಳಿ, ಅಂದಗೋವೆ, ಕಲ್ಲೂರು ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಿಂದ ಕಾಡಾನೆಗಳನ್ನು ಅಟ್ಟುವ ಕಾರ್ಯಾಚರಣೆ ತಾ. 17 ರಂದು (ಇಂದು) ಹಮ್ಮಿಕೊಳ್ಳಲಾಗಿದೆ.

ಅರಣ್ಯ ಇಲಾಖೆಯ ಮೂಲಕ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ಕಾರ್ಯಾಚರಣೆ ನಡೆದು ಆನೆಗಳನ್ನು ಅತ್ತೂರು ಅರಣ್ಯಕ್ಕೆ ಓಡಿಸಲಿದ್ದು, 7 ನೆಯ ಹೊಸಕೋಟೆ ಸೇರಿದಂತೆ ಮೇಲಿನ ಎಲ್ಲಾ ಗ್ರಾಮಸ್ಥರು ಈ ಅವಧಿಯಲ್ಲಿ ಎಚ್ಚರಿಕೆ ವಹಿಸುವ ಮೂಲಕ ಸಹಕರಿಸಬೇಕೆಂದು ಕುಶಾಲನಗರ ಅರಣ್ಯ ವಲಯದ ಅತ್ತೂರು ಶಾಖೆ ಉಪವಲಯ ಅರಣ್ಯ ಅಧಿಕಾರಿಗಳು ಕೋರಿದ್ದಾರೆ.