ಕುಶಾಲನಗರ, ಆ, 16: ಬೈಲುಕೊಪ್ಪೆ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸವಿ ಅವರನ್ನು ಮಡಿಕೇರಿಗೆ ವರ್ಗಾಯಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಬೈಲುಕೊಪ್ಪೆಯಲ್ಲಿ ಕರ್ತವ್ಯದಲ್ಲಿದ್ದ ಸವಿ ಮೂಲತಃ ಕೊಡಗು ಜಿಲ್ಲೆಯ ಬೆಟ್ಟಗೇರಿಯವರಾಗಿದ್ದು, ಅವರನ್ನು ಜಿಲ್ಲೆಯ ಎಫ್ಎಂಎಸ್ ವಿಭಾಗಕ್ಕೆ ನಿಯೋಜಿಸಲಾಗಿದೆ.
ಬೈಲುಕೊಪ್ಪೆ ಠಾಣೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸವಿ ಅವರನ್ನು ಬೀಳ್ಕೊಡಲಾಯಿತು. ಹುಣಸೂರು ಡಿವೈಎಸ್ಪಿ ಸುಂದರ್ರಾಜ್, ಪಿರಿಯಾಪಟ್ಟಣ ವೃತ್ತ ನಿರೀಕ್ಷಕ ಪ್ರದೀಪ್, ಠಾಣಾ ಸಿಬ್ಬಂದಿಗಳು ಇದ್ದರು.