ವೀರಾಜಪೇಟೆ, ಆ. 16: ಕಳೆದ 7ದಿನಗಳಿಂದ ಬೇತರಿ ಹಾಗೂ ಕಾಕೋಟುಪರಂಬು ವಿಭಾಗಕ್ಕೆ ಬಿದ್ದ ಭಾರೀ ಮಳೆಗೆ ಹಾನಿಗೊಳಗಾದ ಪ್ರದೇಶಕ್ಕೆ ತಾಲೂಕು ಆಡಳಿತದ ಪರವಾಗಿ ಕಂದಾಯ ನಿರೀಕ್ಷಕ ಪಳಂಗಪ್ಪ ಪ್ರಕಾಶ್, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೀಪಾ, ಸದಸ್ಯರಾದ ಮಂಡೇಟಿರ ಅನಿಲ್ ಅಯ್ಯಪ್ಪ, ಸೀನಾ ಕುಮಾರಿ, ಸೋಮಣ್ಣ, ಹಾಗೂ ಗ್ರಾಮಸ್ಥರು ಭೇಟಿ ನೀಡಿ ಪರಿಶೀಲಿಸಿದರು.

ಈ ವಿಭಾಗಗಳಲ್ಲಿ ಹಾನಿಗೊಳಗಾದ ಪ್ರದೇಶದ ಬೆಳೆ, ಫಸಲು ನಾಶ ಹಾಗೂ ಮನೆ ಜಖಂಗೊಂಡ ವಿವರವಾದ ವರದಿಯನ್ನು ತಾಲೂಕು ತಹಶೀಲ್ದಾರ್ ಅವರಿಗೆ ಸಲ್ಲಿಸುವುದಾಗಿ ಪಳಂಗಪ್ಪ ತಿಳಿಸಿದರು.