ಗೋಣಿಕೊಪ್ಪ ವರದಿ, ಆ. 15: ಕುಟ್ಟ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದಿಂದ ವಿದ್ಯಾಗಮ ಕಲಿಕೆ ಯೋಜನೆಯಡಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಗ್ರಾಮದ ಮನೆ, ಮನೆಗೆ ತೆರಳಿ ಆನ್‍ಲೈನ್ ತರಗತಿಯಲ್ಲಿ ಮಕ್ಕಳು ಕಲಿಯುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಮುಖ್ಯ ಶಿಕ್ಷಕ ವಿ.ಆರ್. ಶಶಿಧರ್, ಸಿಆರ್‍ಪಿ ಮುರುಗನ್, ದೈಹಿಕ ಶಿಕ್ಷಣ ಶಿಕ್ಷಕ ಪಿ.ಹೆಚ್. ಅಲಿಮಾ, ಶಿಕ್ಷಕಿಯರಾದ ಎ.ಕೆ. ಶಕುಂತಲಾ, ಎಂ.ಎನ್. ಸಜನಿ ಇದ್ದರು.