ಸೋಮವಾರಪೇಟೆ,ಆ.15: ಪಟ್ಟಣದ ಆನೆಕೆರೆ ಬಳಿಯಲ್ಲಿರುವ ನಾಗಬನದ ಮರ ಗಾಳಿ-ಮಳೆಗೆ ತುಂಡಾಗಿ ಬಿದ್ದು, ಬನದ ಆವರಣಕ್ಕೆ ಹಾನಿಯಾಗಿದೆ.

ಅಪಾಯಕಾರಿ ಸ್ಥಿತಿಯಲ್ಲಿದ್ದ ಮರವು ಇಂದು ಬೆಳಿಗ್ಗೆ ಧರಾಶಾಹಿಯಾಗಿದ್ದು, ಯಾವದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಪ್ರತಿದಿನ ಈ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿದ್ದು, ಇದರೊಂದಿಗೆ ಸಾರ್ವಜನಿಕರೂ ಓಡಾಡುತ್ತಿದ್ದರು. ಇಂದು ಯಾರೂ ಇಲ್ಲದ ಸಂದರ್ಭ ಮರ ಬಿದ್ದಿರುವದರಿಂದ ಯಾವದೇ ಅಪಾಯ ಸಂಭವಿಸಿಲ್ಲ.