*ಸಿದ್ದಾಪುರ, ಆ. 16: ಚೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಇರಳೆವಳಮುಡಿ ಗ್ರಾಮ ಸೇರಿದಂತೆ ಅಕ್ಕಪಕ್ಕದ ಪ್ರದೇಶ ಗಳಲ್ಲಿ ಮಳೆಹಾನಿಯಿಂದ ಉಂಟಾಗಿ ರುವ ತೋಟಗಾರಿಕಾ ಬೆಳೆಗಳ ಹಾನಿಯ ಕುರಿತು ಸಂಬಂಧಿಸಿದ ಅಧಿಕಾರಿಗಳು ಸಮೀಕ್ಷೆ ನಡೆಸಿದರು.

ಸೋಮವಾರಪೇಟೆ ತಾಲೂಕು ತೋಟಗಾರಿಕಾ ಇಲಾಖೆ ಅಧಿಕಾರಿ ಶೋಭಾ, ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಗ್ರಾ.ಪಂ. ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಮತ್ತಿತರರು ಮಳೆಹಾನಿ ಪ್ರದೇಶಗಳಿಗೆ ತೆರಳಿ ಬೆಳೆಗಾರರು ಹಾಗೂ ರೈತರಿಗಾದ ನಷ್ಟದ ಬಗ್ಗೆ ಮಾಹಿತಿ ಪಡೆದರು.

ಬಲ್ಲಾರಂಡ ಮೋತಿ ದೇವಯ್ಯ, ಬದಲೇರ ಕೌಶಿಕ್, ಕೊಕ್ಕೇರ ಕಾರ್ಯಪ್ಪ, ಕಾಡೆಮಾಡ ವಿನ್ಸಿ ಅಪ್ಪಣ್ಣ, ಮಾಲೇಟಿರ ವಿಜಯ, ಬಲ್ಲಾರಂಡ ಮುದ್ದಯ್ಯ, ಬಲ್ಲಾರಂಡ ಮಣಿ ಕಾಳಪ್ಪ, ಪೊರಿಮಂಡ ರವಿ, ಮಾದೇಟಿರ ತಿಮ್ಮಯ್ಯ, ಮುಳ್ಳಂಡ ವಾಸು, ಧನುಕಾಳಪ್ಪ, ಕೊರಮಡ ಮಂಜು ಅವರುಗಳಿಗೆ ಸೇರಿದ ತೋಟ ಹಾಗೂ ಪೊನ್ನತ್ ಮೊಟ್ಟೆ ಗ್ರಾಮದ ಕುಸಿದ ಸೇತುವೆ, ಶೇಖರ್ ಎಂಬುವವರಿಗೆ ಸೇರಿದ ಹಾನಿಗೊಳಗಾದ ಮನೆಯನ್ನು ಅಧಿಕಾರಿಗಳು ಪರಿಶೀಲಿಸಿದರು. ಬೆಳೆಗಾರರೊಬ್ಬರ ಸುಮಾರು ಎಂಟು ಎಕರೆ ಕಾಫಿ ತೋಟ ಭೂ ಕುಸಿತ ದಿಂದ ಹಾನಿಯಾಗಿದ್ದು, ಇದರ ಬಗ್ಗೆಯೂ ಮಾಹಿತಿ ಪಡೆದರು.

ನೆಲ್ಯಹಡ್ಲು ಗ್ರಾಮದ ನಡುಬೈಲು ಮತ್ತು ನೂಜಿಬೈಲು ಕುಟುಂಬಕ್ಕೆ ಸೇರಿದ ತೋಟಗಳಿಗೂ ಹಾನಿ ಯಾಗಿದ್ದು, ಮಾಹಿತಿ ಪಡೆದ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿ ಸುವುದಾಗಿ ತಿಳಿಸಿದರು. ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು. ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರು ಈ ಸಂದರ್ಭ ಹಾಜರಿದ್ದರು.