ಮಡಿಕೇರಿ, ಆ. 15: ತ್ರಿಭಾಷಾ ಸಾಹಿತಿ ಡಾ. ಐ.ಮಾ. ಮುತ್ತಣ್ಣ ಹಾಗೂ ಬಿ.ಡಿ. ಗಣಪತಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ, ಕೊಡವಾಮೆರ ಕೊಂಡಾಟ ಕೂಟದ ವತಿಯಿಂದ ನಡೆಯುತ್ತಿರುವ ಸಾಹಿತ್ಯ ಸ್ಪರ್ಧೆಯಲ್ಲಿ ಮೊದಲನೆ ತಿಂಗಳು ಕೊಡವ ಭಾಷೆಯಲ್ಲಿ ಕವನ ರಚಿಸುವ ಸ್ಪರ್ಧೆ ಏರ್ಪಡಿನಲಾಗಿತ್ತು. ಹಾಗೇ ಎರಡನೆ ತಿಂಗಳು ಸಣ್ಣ ಕತೆ (ಚೆರ್ ಕಥೆ) ರಚಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಇದೀಗ ಮೂರನೆ ತಿಂಗಳು ಕೊಡವ ಚುಟುಕ ರಚಿಸುವ ಸ್ಪರ್ಧೆಯನ್ನು ಏರ್ಪಡಿಸಿದ್ದು, ಈ ಸ್ಪರ್ಧೆಯ ಮೊದಲ ಬಹುಮಾನ 2000, ಎರಡನೆ ಬಹುಮಾನ 1000 ಹಾಗೂ ಮೂರನೆ ಬಹುಮಾನ 500 ರೂ ಬಹುಮಾನವನ್ನು ಶಾಸ್ತ್ರೀಯ ಸಂಗೀತ ಖ್ಯಾತಿಯ ಮೊಣ್ಣಂಡ ಶೋಭ ಸುಬ್ಬಯ್ಯ ಅವರು ಪ್ರಾಯೋಜಿಸಿದ್ದಾರೆ.
ಸಂಚಾಲಕರಾಗಿ ಸಣ್ಣುವಂಡ ಕಿಸು ದೇವಯ್ಯ ಅವರು ಕಾರ್ಯನಿರ್ವಹಿಸಿ ದ್ದಾರೆ. ಈ ಸ್ಪರ್ಧೆಯಲ್ಲಿ ಯಾವುದೇ ಜಾತಿ, ಬೇಧದ ಅಂತರ ವಿಲ್ಲದೆ, ವಯಸ್ಸಿನ ಅಂತರವಿಲ್ಲದೆ, ಯಾರು ಬೇಕಾದರೂ ಭಾಗವಹಿಸಬಹು ದಾಗಿದ್ದು, ಚುಟುಕು ಕೊಡವ ಬಾಷೆಯಲ್ಲೆ ಇರಬೇಕು, ಚುಟುಕದ ನಿಯಮಗಳು, ಶೀರ್ಷಿಕೆ ಕಡ್ಡಾಯ, ಚುಟುಕು 5 ರಿಂದ 6 ಗೆರೆ ಮೀರಿರ ಬಾರದು, ಕನ್ನಡ ಲಿಪಿಯಲ್ಲೆ ಟೈಪ್ ಮಾಡಿರಬೇಕು, ಮೊಬೈಲ್'ನಲ್ಲಿ ಟೈಪ್ ಮಾಡಲು ಸಾದ್ಯವಾಗದವರು ಬರೆದು ಅದರ ಪೆÇೀಟೊ ತೆಗೆದು ಕೆಳಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಕಳುಹಿಸತಕ್ಕದ್ದು, ಸ್ವಂತ ರಚನೆಯ ದಾಗಿರಬೇಕು, ಚುಟುಕು ಈ ಹಿಂದೆ ಬೇರೆಲ್ಲೂ ಪ್ರಕಟವಾಗಿರ ಬಾರದು, ಒಬ್ಬರಿಗೆ 5 ಚುಟುಕು ರಚಿಸಲು ಅವ ಕಾಶವಿದೆ, ಚುಟುಕು ಕಳುಹಿಸುವಾಗ ಹೆಸರು, ಮೊಬೈಲ್ ಸಂಖ್ಯೆ, ಒಂದು ಸ್ಟಾಂಪು ಸೈಜ್ ಫೋಟೊ ಕಡ್ಡಾಯವಾಗಿ ಕಳುಹಿಸಬೇಕು. ಹಾಗೂ ರಚಿಸಿದ ಚುಟುಕು ಇದೇ ತಿಂಗಳ 25 ನೇ ತಾರೀಖು ರಾತ್ರಿ 10 ಗಂಟೆ ಒಳಗೆ ಕೆಳಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು ಎಂದು ಕೊಡವಾಮೆರ ಕೊಂಡಾಟ ಕೂಟದ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಹಾಗೂ ಆಡಳಿತ ಮಂಡಳಿಯು ಪ್ರಕಟಣೆ ತಿಳಿಸಿದೆ. ಚುಟುಕು ಕಳುಹಿಸ ಬೇಕಾದ ಮೊಬೈಲ್ ಸಂಖ್ಯೆ 9880578830.