ಮಡಿಕೇರಿ, ಆ. 14: ಅರೆಕಾಡು ಗ್ರಾಮದಲ್ಲಿ ತಾ. 12 ರಂದು ರಾತ್ರಿ ಅಲ್ಲಿನ ಬಿದ್ದಂಡ ಭೀಮಯ್ಯ ಅವರ ಮನೆಯ ಅಂಗಳಕ್ಕೆ ದಾಳಿ ಮಾಡಿರುವ ಕಾಡಾನೆಗಳು ಇದೀಗ ಸನಿಹದ ತೋಟಗಳಲ್ಲಿ ಬೀಡುಬಿಟ್ಟಿವೆ.

ಭೀಮಯ್ಯ ಅವರ ಮನೆಯ ಸಜ್ಜೆಯಲ್ಲಿದ್ದ ಹೂಕುಂಡ ಮತ್ತಿತರ ಸಾಮಗ್ರಿಗಳನ್ನು ಅಂಗಳಕ್ಕೆ ಎಳೆದು ಮನೆಯ ಸುತ್ತಲು ತಿರುಗಾಡಿರುವ ಆನೆ ಬಳಿಕ ತೋಟದಲ್ಲಿ ಸೇರಿಕೊಂಡಿದೆ. ಈ ವಿಭಾಗದಲ್ಲಿ ನಿರಂತರವಾಗಿ ಆನೆ ದಾಳಿ ಮುಂದುವರಿಯುತ್ತಿದ್ದು, ಕೃಷಿ ಫಸಲು ಧ್ವಂಸಗೊಳ್ಳುತ್ತಿವೆ. ಅರಣ್ಯ ಇಲಾಖೆ ಈ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.