ಮಡಿಕೇರಿ, ಆ. 13: ಸಿರಿಗನ್ನಡ ವೇದಿಕೆ ವತಿಯಿಂದ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕನ್ನಡದಲ್ಲಿ ಪ್ರಬಂಧ ಯುವ ಸ್ಪರ್ಧೆ ಏರ್ಪಡಿಸಲಾಗಿದೆ. ಮರೆತು ಹೋಗಿರುವ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರನ್ನು ಯುವ ಪೀಳಿಗೆಗೆ ಪರಿಚಯಿಸುವ ಮುಖ್ಯ ಉದ್ದೇಶದೊಂದಿಗೆ ಸ್ಪರ್ಧೆ ಏರ್ಪಡಿಸಲಾಗಿದೆ.

ಸಂಗ್ರಹ ಬರಹಗಳನ್ನು ಪುಸ್ತಕ ರೂಪದಲ್ಲಿ ತರಲಾಗುವುದು. ಬರಹಗಾರರ ಪಾಸ್‍ಪೋರ್ಟ್ ಅಳತೆಯ ಫೋಟೋ, ಫೋನ್ ನಂಬರ್, ಸಂಪೂರ್ಣ ವಿಳಾಸವನ್ನು ತಾ. 14ರ ಮಧ್ಯರಾತ್ರಿ 12 ಗಂಟೆಯ ಒಳಗೆ, ವಾಟ್ಸಾಪ್ ಸಂಖ್ಯೆ: 8105493795 ಕ್ಕೆ ಕಳುಹಿಸಬಹುದಾಗಿದೆ. ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿಜೇತರೊಂದಿಗೆ ಎಲ್ಲಾ ಬರಹಗಾರರಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವದು. ಫಲಿತಾಂಶವನ್ನು ತಾ. 31 ರಂದು ಪ್ರಕಟಿಸಲಾಗುವದು ಎಂದು ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9448312310 ಸಂಪರ್ಕಿಸಬಹುದಾಗಿದೆ.