ಸುಂಟಿಕೊಪ್ಪ, ಆ. 13: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಲ್ಲಿನ ಸುತ್ತ ಮುತ್ತಲಿನ ದೇವಾಲಯಗಳಲ್ಲಿ ವಿಶೇಷ ಪೂಜೆ ಹೋಮ, ಭಜನೆ ನಡೆಸಲಾಯಿತು.
ಕೊಡಗರಹಳ್ಳಿ ಬೈತೂರಪ್ಪ ದೇವಾಲಯದಲ್ಲಿ ಅರ್ಚಕ ಚಂದ್ರಶೇಖರ ಭಟ್ ಅವರಿಂದ ವಿಶೇಷ ವೂಜೆ ಮಹಾಮಂಗಳಾರತಿ ನಡೆಯಿತು. ಏಳನೇ ಹೊಸಕೋಟೆ ಶ್ರೀ ಮಹಾಗಣಪತಿ ದೇವಾಲಯ, ಗೋಪಾಲ ಕೃಷ್ಣ ದೇವಾಲಯ, ದುರ್ಗಾಲಕ್ಷ್ಮಿ ದೇವಾಲಯದಲ್ಲಿ ಮಹಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ಪ್ರಧಾನ ಅರ್ಚಕ ನರಸಿಂಹ ಉಪಾದ್ಯಾಯ ಮತ್ತು ಕೃಷ್ಣ ಮೂರ್ತಿ ಅರ್ಚಕರಿಂದ ಗಣಹೋಮ, ವಿಶೇಷ ಪೂಜೆ, ಗೋಪಾಲಕೃಷ್ಣ ದೇವರಿಗೆÀ ಅಭಿಷೇಕ ಅಲಂಕಾರ, ಮಾಲಾರ್ಪಣೆ, ಭಜನೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.