ಸುಂಟಿಕೊಪ್ಪ, ಆ. 13: ಜಂಬೂರು ಬಾಣೆ ವ್ಯಕ್ತಿಯೋರ್ವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸುತ್ತಮುತ್ತಲಿನ 17 ಮನೆಗಳನ್ನು ಸೀಲ್ಡೌನ್ ಮಾಡಲಾಗಿತ್ತು.
ಸೀಲ್ಡೌನ್ಗೊಳಿಸಲಾದ ಸ್ಥಳದಲ್ಲಿ ಕೂಲಿ ಕೆಲಸ ನಿರ್ವಹಿಸಿ ಜೀವನ ಸಾಗಿಸುತ್ತಿರುವ ಕುಟುಂಬಗಳಿದ್ದು, ಇವರಿಗೆ ಸರಕಾರದಿಂದ ಯಾವುದೇ ನೆರವು ಸಿಗದೆ ಇರುವುದನ್ನು ಮನಗಂಡ ಸೋಮವಾರಪೇಟೆ ತಾಲೂಕು ಬಿ.ಜೆ.ಪಿ. ಖಜಾಂಚಿ ನಾಪಂಡ ಉತ್ತಪ್ಪ ಅವರು ಜಂಬೂರು ಬಾಣೆಗೆ ತೆರಳಿ ನಿತ್ಯೋಪಯೋಗಿ ದಿನಸಿ ಆಹಾರ ಸಾಮಗ್ರಿಗಳ ಕಿಟ್ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ಕುಟುಂಬಗಳಿಗೆ ಆಹಾರದ ಕೊರತೆ ಕಂಡುಬಂದಲ್ಲಿ ಸಹಾಯ ಹಸ್ತ ಚಾಚುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾದಾಪುರ ನಗರ ಬಿ.ಜೆ.ಪಿ. ಕಾರ್ಯದರ್ಶಿ ಅಶೋಕ, ಕಾರ್ಯಕರ್ತರಾದ ಮಧು, ಶಶಿ, ಹಾಜರಿದ್ದರು.