ನಾಪೆÇೀಕ್ಲು, ಆ. 13: ಕಳೆದ ಏಳು ದಿನಗಳಿಂದ ಸುರಿದ ಮಳೆಗೆ ವಿವಿಧ ಭಾಗಗಳಿಂದ ಪ್ರವಾಹದ ನೀರಿನಲ್ಲಿ ತ್ಯಾಜ್ಯಗಳು ನೀರಿನಲ್ಲಿ ಹರಿದು ಬಂದಿದ್ದು ಕೊಟ್ಟಮುಡಿ ಮತ್ತು ಹೊದವಾಡ ಭಾಗದಲ್ಲಿ ಈ ತ್ಯಾಜ್ಯದ ರಾಶಿಗಳು ಗಿಡ ಮರಗಳಲ್ಲಿ ಮತ್ತು ತೋಡಿನ ಪೊದೆಯಲ್ಲಿ ರಾಶಿ ರಾಶಿಯಾಗಿ ಸಿಕ್ಕಿ ಹಾಕಿ ವಾತಾವರಣ ಕಲುಷಿತವಾಗಿದೆ. ತ್ಯಾಜ್ಯದ ರಾಶಿಯು ಕೊಳೆತು ಈ ಭಾಗದಲ್ಲಿ ದುರ್ವಾಸನೆ ಬೀರತೊಡಗಿದೆ. ಇದರಿಂದ ಈ ಭಾಗದ ಜನರಲ್ಲಿ ಆತಂಕ ಮನೆ ಮಾಡಿ ಸಾಂಕ್ರಾಮಿಕ ರೋಗವು ಹರಡುವ ಲಕ್ಷಣಗಳು ಎದ್ದು ಕಾಣುತ್ತಿದೆ. ಗ್ರಾಮ ಪಂಚಾಯಿತಿಯವರು ಕಸವನ್ನು ಸ್ವಚ್ಛ ಮಾಡಿ ಇಲ್ಲಿನ ಜನರ ಆರೋಗ್ಯವನ್ನು ಕಾಪಾಡಬೇಕಿದೆ. ತುರ್ತಾಗಿ ಇಲ್ಲಿಗೆ ಔಷಧಿಯನ್ನು ಸಿಂಪಡಿಸಿ ನೊಣಗಳು ಇತರ ರೋಗ ತರುವ ಕೀಟಗಳು ಬಾಧಿಸದಂತೆ ಎಚ್ಚರ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

-ದುಗ್ಗಳ