ಕುಶಾಲನಗರ, ಆ. 12: ಕಾವೇರಿ ಈ ಬಾರಿ ಕೂಡ ಅಪಾಯದ ಮಟ್ಟ ಮೀರಿ ಹರಿದ ಹಿನ್ನೆಲೆಯಲ್ಲಿ ಕೊಡಗು-ಮೈಸೂರು ಜಿಲ್ಲೆ ಗಡಿಭಾಗ ಕುಶಾಲನಗರ- ಕೊಪ್ಪದಲ್ಲಿರುವ ಕಾವೇರಿ ನದಿ ಸೇತುವೆಯ ಪಾಶ್ರ್ವ ಒಂದರಲ್ಲಿ ಕಲ್ಲುಗಳು ಕುಸಿದು ನಿಂತಿರುವ ದೃಶ್ಯ ಗೋಚರಿಸಿದೆ. ಕಳೆದ ಬಾರಿ ಆಗಸ್ಟ್‍ನಲ್ಲಿ ಬಂದ ಪ್ರವಾಹಕ್ಕೆ ಬಹುತೇಕ ತಡೆಗೋಡೆ ಕುಸಿದು ಬಿದ್ದಿತ್ತು. ಇದೀಗ ಬಹುತೇಕ ಕಲ್ಲು ಕಟ್ಟಡ ನದಿಗೆ ಜಾರಿದ್ದು ಸೇತುವೆಗೆ ಅಭದ್ರತೆ ಕಾಡುವ ಸಾಧ್ಯತೆ ಅಧಿಕವಾಗಿದೆ.
ಕಾವೇರಿ ನದಿಗೆ 20 ವರ್ಷಗಳ ಗೋಚರಿಸಿದೆ. ಕಳೆದ ಬಾರಿ ಆಗಸ್ಟ್‍ನಲ್ಲಿ ಬಂದ ಪ್ರವಾಹಕ್ಕೆ ಬಹುತೇಕ ತಡೆಗೋಡೆ ಕುಸಿದು ಬಿದ್ದಿತ್ತು. ಇದೀಗ ಬಹುತೇಕ ಕಲ್ಲು ಕಟ್ಟಡ ನದಿಗೆ ಜಾರಿದ್ದು ಸೇತುವೆಗೆ ಅಭದ್ರತೆ ಕಾಡುವ ಸಾಧ್ಯತೆ ಅಧಿಕವಾಗಿದೆ.
ಕಾವೇರಿ ನದಿಗೆ 20 ವರ್ಷಗಳ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿರುವ ವಾಹನಗಳು ದಿನನಿತ್ಯ ಈ ಹೆದ್ದಾರಿ ಮೂಲಕ ಸೇತುವೆ ದಾಟಬೇಕಾಗಿದ್ದು ಈ ಬಗ್ಗೆ ಪರಿಶೀಲನೆ ನಡೆಸುವುದು ಒಳಿತು ಎನ್ನುವುದು ಇಲ್ಲಿನ ನಾಗರಿಕರ ಅಭಿಪ್ರಾಯವಾಗಿದೆ. ಸತತ ಮೂರು ವರ್ಷಗಳ ಕಾಲ ಸೇತುವೆ ಮಟ್ಟಕ್ಕೆ ನೀರು ಹರಿದಿದ್ದು ಸೇತುವೆಯ ನಿರ್ವಹಣೆ ಕಾಮಗಾರಿ ನಡೆದಿಲ್ಲ. ಭಾರೀ ಗಾತ್ರದ ಮರ, ದಿಮ್ಮಿಗಳು ಸೇತುವೆಯ ಅಡಿ ಭಾಗದಲ್ಲಿ ಸಿಲುಕಿಕೊಂಡಿದ್ದು ಇದನ್ನು ಕೂಡ ತೆರವುಗೊಳಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕಾಗಿದೆ.
-ಚಂದ್ರಮೋಹನ್