ವೀರಾಜಪೇಟೆ, ಆ. 12: ಈ ವರ್ಷದ ಪಂಚಾಂಗದಂತೆ ಇದೇ ತಿಂಗಳ 21 ರಂದು ಗೌರಿ ವೃತ, 22ರಂದು ಸಿದ್ಧಿವಿನಾಯಕ ವೃತ ನಿಗದಿಯಾಗಿದ್ದು, ಸುಮಾರು ಎಂಟು ದಶಕಗಳಿಂದಲೂ ಗೌರಿ-ಗಣೇಶೋತ್ಸವದ ಆಚರಣೆಗೆ 45 ದಿನಗಳಿಂದಲೇ ಸಿದ್ಧತೆ ನಡೆಸುತ್ತಿದ್ದ ವೀರಾಜಪೇಟೆ ಪಟ್ಟಣದ ವಿವಿಧ ಉತ್ಸವ ಸಮಿತಿಗಳು ಕೊರೊನಾ ಸಾಂಕ್ರಮಿಕ ವೈರಸ್ ಹಿನ್ನೆಲೆಯಲ್ಲಿ ಆಚರಣೆ ಬೇಕೊ ಬೇಡವೇ ಎಂಬ ವಿಚಾರದಲ್ಲಿ ಇನ್ನು ಅಂತಿಮ ನಿರ್ಧಾರಕ್ಕೆ ಬಂದಿಲ್ಲ.ವೀರಾಜಪೇಟೆಯ ಐತಿಹಾಸಿಕ ಗೌರಿ-ಗಣೇಶೋತ್ಸವ ಕೊಡಗಿನಲ್ಲಿ ಹೆಸರುವಾಸಿಯಾಗಿದ್ದು, ಮಡಿಕೇರಿ ದಸರಾ ಉತ್ಸವವನ್ನು ಹೊರತುಪಡಿಸಿದರೆ ಇಲ್ಲಿನ ಗೌರಿ-ಗೌಣೇಶೋತ್ಸವದ ಆಚರಣೆ ಪ್ರಮುಖವಾಗಿತ್ತು. ಕೊರೊನಾ ಹಿನೆÀ್ನಲೆಯಲ್ಲಿ ಯಾವುದೇ ಗೌರಿ-ಗಣೇಶ ಸಮಿತಿಗಳು ಉತ್ಸವ ಆಚರಣೆಗೆ ವೀರಾಜಪೇಟೆ, ಆ. 12: ಈ ವರ್ಷದ ಪಂಚಾಂಗದಂತೆ ಇದೇ ತಿಂಗಳ 21 ರಂದು ಗೌರಿ ವೃತ, 22ರಂದು ಸಿದ್ಧಿವಿನಾಯಕ ವೃತ ನಿಗದಿಯಾಗಿದ್ದು, ಸುಮಾರು ಎಂಟು ದಶಕಗಳಿಂದಲೂ ಗೌರಿ-ಗಣೇಶೋತ್ಸವದ ಆಚರಣೆಗೆ 45 ದಿನಗಳಿಂದಲೇ ಸಿದ್ಧತೆ ನಡೆಸುತ್ತಿದ್ದ ವೀರಾಜಪೇಟೆ ಪಟ್ಟಣದ ವಿವಿಧ ಉತ್ಸವ ಸಮಿತಿಗಳು ಕೊರೊನಾ ಸಾಂಕ್ರಮಿಕ ವೈರಸ್ ಹಿನ್ನೆಲೆಯಲ್ಲಿ ಆಚರಣೆ ಬೇಕೊ ಬೇಡವೇ ಎಂಬ ವಿಚಾರದಲ್ಲಿ ಇನ್ನು ಅಂತಿಮ ನಿರ್ಧಾರಕ್ಕೆ ಬಂದಿಲ್ಲ.
ವೀರಾಜಪೇಟೆಯ ಐತಿಹಾಸಿಕ ಗೌರಿ-ಗಣೇಶೋತ್ಸವ ಕೊಡಗಿನಲ್ಲಿ ಹೆಸರುವಾಸಿಯಾಗಿದ್ದು, ಮಡಿಕೇರಿ ದಸರಾ ಉತ್ಸವವನ್ನು ಹೊರತುಪಡಿಸಿದರೆ ಇಲ್ಲಿನ ಗೌರಿ-ಗೌಣೇಶೋತ್ಸವದ ಆಚರಣೆ ಪ್ರಮುಖವಾಗಿತ್ತು. ಕೊರೊನಾ ಹಿನೆÀ್ನಲೆಯಲ್ಲಿ ಯಾವುದೇ ಗೌರಿ-ಗಣೇಶ ಸಮಿತಿಗಳು ಉತ್ಸವ ಆಚರಣೆಗೆ ಮೂರ್ತಿಯ ಮೆರವಣಿಗೆಯನ್ನು ಕೈ ಬಿಡುವ ಅಭಿಪ್ರಾಯದಲ್ಲಿದೆ.
ಅಧಿಕಾರಿಗಳು ಉತ್ಸವ ಆಚರಣೆಯ ಸಂಬಂಧದಲ್ಲಿ ಈಚೆಗೆ ನಡೆಸಿದ ಪೂರ್ವಭಾವಿ ಸಭೆಗಳಲ್ಲೂ ಈಗಿನ ಕೋವಿಡ್-19ರ ಎಲ್ಲ ಷರತ್ತುಗಳು, ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉತ್ಸವದ ಪೂಜಾ ಕೈಂಕರ್ಯದಲ್ಲಿ ನಿಗದಿತ ಭಕ್ತಾದಿಗಳು, ಉತ್ಸವ ಪ್ರತಿನಿಧಿಗಳು ಮಾತ್ರ ಭಾಗವಹಿಸಲು ಅವಕಾಶ ನೀಡಬೇಕು. ಕೊರೊನಾ ಸಾಂಕ್ರಾಮಿಕ ವೈರಸ್‍ನ ಕುರಿತು ಮುಂಜಾಗ್ರತೆ ವಹಿಸಲು ಉತ್ಸವ ಸಮಿತಿಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಷರತ್ತು ವಿಧಿಸಿದ್ದಾರೆ.
ಐತಿಹಾಸಿಕ ಗೌರಿ-ಗಣೇಶ ನಾಡಹಬ್ಬದ ಸಮಿತಿಯ ಅಧ್ಯಕ್ಷ ಬಿ.ಜಿ. ಸಾಯಿನಾಥ್ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ವೀರಾಜಪೇಟೆಯಲ್ಲಿ ಎಂಟು ದಶಕಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ಉತ್ಸವವನ್ನು ಕೊರೊನಾ ವೈರಸ್‍ನ ಹಿನ್ನೆಲೆಯಲ್ಲಿ ಯಾವ ರೀತಿಯಲ್ಲಿ ಆಚರಿಸಬೇಕು. ಸರಕಾರದ ಮಾರ್ಗಸೂಚಿ ಆದೇಶ ಷರತ್ತುಗಳನ್ನು ಪಾಲಿಸಬೇಕು. ಉತ್ಸವ ಆಚರಣೆಗೆ ಜಿಲ್ಲಾಧಿಕಾರಿಯ ಅನುಮತಿ, ಷರತ್ತು ಮಾರ್ಗ ಸೂಚಿಗಳಿಗಾಗಿ ಜಿಲ್ಲಾಧಿಕಾರಿಗೆ ಸಂಘದಿಂದ ಪತ್ರ ಬರೆಯಲಾಗಿದೆ. ಜಿಲ್ಲಾಧಿಕಾರಿಯ ಅನುಮತಿ, ಅಭಿಪ್ರಾಯದ ನಂತರ ಎಲ್ಲ 21 ಉತ್ಸವ ಸಮಿತಿಗಳು ಒಮ್ಮತವಾಗಿ ಸಭೆ ಸೇರಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕಳೆದ 1960ರಲ್ಲಿ ಕೇವಲ ಎರಡು ಉತ್ಸವ ಸಮಿತಿಗಳು ಮಾತ್ರ ಗೌರಿ-ಗಣೇಶನ ಉತ್ಸವವನ್ನು ಹತ್ತು ದಿನಗಳ ಕಾಲ ಆಚರಿಸಿ ಅದರಂತೆ ಅನಂತ ಪದ್ಮನಾಭ ವ್ರತ ದಿನದಂದು ಸಾಮೂಹಿಕ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸುತ್ತಿದ್ದವು. 1964-65 ರಿಂದ ಉತ್ಸವಕ್ಕೆ ಇನ್ನೆರಡು ಸಮಿತಿಗಳು ಸೇರಿದಂತೆ 2000ದ ವೇಳೆಗೆ ಸುಮಾರು 13 ಉತ್ಸವ ಸಮಿತಿಗಳು 2016ರ ಹೊತ್ತಿಗೆ 18 ನಂತರ 2018 ರ ವೇಳೆಗೆ 21 ಉತ್ಸವ ಸಮಿತಿಗಳು ಗೌರಿ-ಗಣೇಶನನ್ನು ಪ್ರತಿಷ್ಠಾಪಿಸಿ ಹತ್ತು ದಿನಗಳ ಕಾಲ ಪೂಜಿಸಿ ಅನಂತ ಪದ್ಮನಾಭ ವ್ರತದ ದಿನದಂದು ಸಾಮೂಹಿಕ ಮೆರವಣಿಗೆ ನಡೆಸಿ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಪವಿತ್ರವಾದ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಎಲ್ಲ ಉತ್ಸವ ಮೂರ್ತಿಗಳನ್ನು ವಿಸರ್ಜಿಸುತ್ತಿದ್ದರು. ಈಗಿನ ಕೊರೊನಾ ವೈರಸ್ ಎಲ್ಲ ಕಾರ್ಯಕ್ರಮಗಳಿಗೂ ಮಾರಕವಾಗಿದೆ. -ಡಿ.ಎಂ. ರಾಜ್‍ಕುಮಾರ್