ಮಡಿಕೇರಿ, ಆ. 12: ಜಿಲ್ಲೆಯಲ್ಲಿ ಹೊಸದಾಗಿ 60 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಂದು ದಿನದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾದಂತಾಗಿದೆ. ಈ ಹಿಂದೆ ಒಂದು ದಿನದಲ್ಲಿ 50 ಪ್ರಕರಣಗಳು ದಾಖಲಾಗಿದ್ದವು. ಜಿಲ್ಲೆಯಲ್ಲಿ ಇದುವರೆಗೆ 820 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 556 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 11 ಮಂದಿ ಸಾವನ್ನಪ್ಪಿದ್ದು, 253 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ 236 ನಿಯಂತ್ರಿತ ವಲಯಗಳಿವೆ. ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 65 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 85 ಮಂದಿ ಹಾಗೂ ಹೋಮ್ ಐಸೋಲೇಶನ್‍ನಲ್ಲಿ 103 ಮಂದಿ ದಾಖಲಾಗಿದ್ದಾರೆ.
ಹೊಸ ಪ್ರಕರಣಗಳ ವಿವರ
ಮಡಿಕೇರಿಯ ಕಾರಗುಂದ ಕಡಿಯತ್ತೂರಿನ 32 ವರ್ಷದ ಮಹಿಳೆ, ಸಿದ್ದಾಪುರದ ಎಂ.ಜಿ ರಸ್ತೆಯ 37 ವರ್ಷದ ಮಹಿಳೆ, 14 ವರ್ಷದ ಬಾಲಕಿ, 58 ವರ್ಷದ ಪುರುಷ, 47, 70 ವರ್ಷದ ಮಹಿಳೆ ಮತ್ತು 9 ವರ್ಷದ ಬಾಲಕ, ಶಿರಂಗಾಲದ 76 ವರ್ಷದ ಪುರುಷÀ ಮತ್ತು 60 ವರ್ಷದ ಮಹಿಳೆ. ವೀರಾಜಪೇಟೆಯ ಕಲ್ಲುಬಾಣೆಯ 38 ವರ್ಷದ ಪುರುಷ, ಮಡಿಕೇರಿ ಭಗವತಿ ನಗರದ 29 ವರ್ಷದ ಪುರುಷ, ಕುಶಾಲನಗರದ 35 ವರ್ಷದ ಪುರುಷ, ಕುಶಾಲನಗರದ ದಂಡಿನಪೇಟೆಯ 52 ವರ್ಷದ ಪುರುಷ, ಮಡಿಕೇರಿಯ ಆಜಾದ್ ನಗರದ 25, 28 ವರ್ಷದ ಮಹಿಳೆಯರು, 14 ವರ್ಷದ ಬಾಲಕಿ.
ಸೋಮವಾರಪೇಟೆಯ ಹಾಲೇರಿ ಗ್ರಾಮದ ತತ್ತಿಬಾಣೆಯ 39 ವರ್ಷದ ಮಹಿಳೆ, ಕೊಡ್ಲಿಪೇಟೆಯಲ್ಲಿನ ಅವರೆದಾಳುವಿನ 43 ವರ್ಷದ ಪುರುಷ, ಸೋಮವಾರಪೇಟೆಯ ಹಾನಗಲ್ ಗ್ರಾಮದ 55 ವರ್ಷದ ಮಹಿಳೆ, ಸೋಮವಾರಪೇಟೆ ವೆಂಕಟೇಶ್ವರ ಬ್ಲಾಕಿನ 40 ವರ್ಷದ ಮಹಿಳೆ, ಕುಶಾಲನಗರದ ಗೌಡ ಸಮಾಜ ಬಳಿಯ ಅಂಗನವಾಡಿ ಹಿಂಭಾಗದ 54 ವರ್ಷದ ಪುರುಷ, ಸೋಮವಾರಪೇಟೆ ಮಾರಿಯಮ್ಮ ದೇವಾಲಯ ಬಳಿಯ ಗಾಂಧೀನಗರದ 19 ವರ್ಷದ ಮಹಿಳೆ, ಶನಿವಾರಸಂತೆಯ ಚಂಗದಳ್ಳಿಯ 57 ವರ್ಷದ ಪುರುಷ ಮತ್ತು 53 ವರ್ಷದ ಮಹಿಳೆ, ಶನಿವಾರಸಂತೆಯ ಗುಂಡೂರಾವ್ ಬಡಾವಣೆಯ 36 ವರ್ಷದ ಪುರುಷ, ಶನಿವಾರಸಂತೆ ಮೈಲಾಪುರ ಬಳಿಯ 74 ವರ್ಷದ ಪುರುಷ, ಸೋಮವಾರಪೇಟೆ ಗೌಡಳ್ಳಿ ಕೂಗೂರುವಿನ 54 ವರ್ಷದ ಮಹಿಳೆ.
ಸೋಮವಾರಪೇಟೆ ಗೌಡಳ್ಳಿಯ 35 ವರ್ಷದ ಮಹಿಳೆ, ಸೋಮವಾರಪೇಟೆ ಅಂಕನಹಳ್ಳಿ ಗ್ರಾಮದ 42 ವರ್ಷದ ಪುರುಷ, ಪೆÇನ್ನಂಪೇಟೆಯ ಹುಸ್ಕೇರಿ ಲೇಔಟಿನ ಭಗವತಿ ನಗರದ 60 ವರ್ಷದ ಪುರುಷ, 38 ವರ್ಷದ ಮಹಿಳೆ ಮತ್ತು 16 ವರ್ಷದ ಬಾಲಕ, ವೀರಾಜಪೇಟೆ ಕೆ.ಬಾಡಗದ 32 ವರ್ಷದ ಪುರುಷ ಮತ್ತು 27 ವರ್ಷದ ಮಹಿಳೆ, ವೀರಾಜಪೇಟೆ ವಿಜಯನಗರದ 48 ವರ್ಷದ ಪುರುಷ, ಬೊಯಿಕೇರಿ ಗ್ರಾಮದ 55 ವರ್ಷದ ಮಹಿಳೆ, ವೀರಾಜಪೇಟೆ ಪೆರುಂಬಾಡಿಯ ಆರ್ಜಿ ಬಳಿಯ ವಾಲ್ಮೀಕಿ ಭವನ ಸಮೀಪದ 27 ವರ್ಷದ ಪುರುಷ, ಮಡಿಕೇರಿ ಬ್ರಾಹ್ಮಣರ ಬೀದಿಯ ರೆಡ್‍ಫರ್ನ್ ಹೊಟೇಲ್ ಬಳಿಯ 45 ವರ್ಷದ ಮಹಿಳೆ, ಮಡಿಕೇರಿ ಮಹದೇವಪೇಟೆಯ 21 ವರ್ಷದ ಮಹಿಳೆ, 13 ವರ್ಷದ ಬಾಲಕಿ, 55 ಮತ್ತು 48 ವರ್ಷದ ಪುರುಷರು, ಮಡಿಕೇರಿ ಮಹದೇವಪೇಟೆಯ 36 ವರ್ಷದ ಪುರುಷ, ಸುಂಟಿಕೊಪ್ಪ 2ನೇ ಬ್ಲಾಕಿನ 35 ವರ್ಷದ ಮಹಿಳೆ, ಕೊಪ್ಪ ರಸ್ತೆಯ ದೊಡ್ಡಮನೆ ಬಸವೇಶ್ವರ ದೇವಾಲಯದ ಹಿಂಭಾಗದ 72 ವರ್ಷದ ಮಹಿಳೆ.
ಮಡಿಕೇರಿ ಸುದರ್ಶನ ವೃತ್ತ ಅಂಬೇಡ್ಕರ್ ಭವನ ಬಳಿಯ 53 ವರ್ಷದ ಪುರುಷ, ವೀರಾಜಪೇಟೆ ಗೋಣಿಕೊಪ್ಪದ ಮುಕುಂದ ಲೇಔಟಿನ 3ನೇ ಬ್ಲಾಕಿನ 36 ವರ್ಷದ ಮಹಿಳೆ, ಮೂರ್ನಾಡಿನ 24 ವರ್ಷದ ಪುರುಷ, ಮಡಿಕೇರಿ ಮುತ್ತಪ್ಪ ದೇವಾಲಯ ರಸ್ತೆಯ 44 ವರ್ಷದ ಪುರುಷ ಮತ್ತು 6 ವರ್ಷದ ಬಾಲಕ, ನಾಪೆÇೀಕ್ಲು ಕೊಟ್ಟಮುಡಿ ಯಲ್ಲಿನ 23 ವರ್ಷದ ಮಹಿಳೆ, ಮಡಿಕೇರಿ ಮಹದೇವಪೇಟೆ ಮಸೀದಿ ಎದುರಿನ 44 ವರ್ಷದ ವ್ಯಕ್ತಿ. ಮಡಿಕೇರಿ ಮಹದೇವಪೇಟೆಯ ಮಸೀದಿ ಬಳಿಯ 45 ವರ್ಷದ ಪುರುಷ, ವಿ.ಬಾಡಗ ಕುಟ್ಟಂದಿ ಅಂಚೆಯ 38 ವರ್ಷದ ಪುರುಷ, ಮಡಿಕೇರಿ ಮಲ್ಲಿಕಾರ್ಜುನ ನಗರದ 53 ವರ್ಷದ ಪುರುಷ, ತಿತಿಮತಿಯ 32 ವರ್ಷದ ಮಹಿಳೆ, ಸುಂಟಿಕೊಪ್ಪದ ಹರದೂರು ಗ್ರಾಮದ 40 ವರ್ಷದ ಪುರುಷ, ಹಾರಂಗಿ ರಸ್ತೆಯ ಬೊಳ್ಳೂರು ಗ್ರಾಮದ 52 ಮತ್ತು 27 ವರ್ಷದ ಮಹಿಳೆ, ಎಮ್ಮೆಮಾಡುವಿನ 34 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ್ಲಲಿ ಕೊರೊನಾ ಮೊಬೈಲ್ ಪರೀಕ್ಷಾ ಘಟಕದ ಮೂಲಕ ನಡೆಸಿದ ಪರೀಕ್ಷೆಯಲ್ಲಿ ಇಬ್ಬರಿಗೆ ಸೋಂಕು ದೃಢವಾಗಿದೆ. ಪ.ಪಂ. ಕಚೇರಿ ಆವರಣದಲ್ಲಿ 106 ಮಂದಿಯ ಗಂಟಲು ದರವ ಪರೀಕ್ಷೆ ನಡೆಸಲಾಗಿದ್ದು, ಇಬ್ಬರಿಗೆ ಸೋಂಕು ದೃಢವಾಗಿದೆ.