ಮಡಿಕೇರಿ, ಆ.12: ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರೀ ಮಳೆಗೆ ಸಾಕಷ್ಟು ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಸುರಿದ ವ್ಯಾಪಕ ಮಳೆ ಮತ್ತು ಭಾರೀ ಗಾಳಿಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮಡಿಕೇರಿ ವಿಭಾಗದಲ್ಲಿ ಉಂಟಾದ ಹಾನಿಯ ಮಾಹಿತಿಯನ್ನು ಸೆಸ್ಕ್ ಇಇ ಸೋಮಶೇಖರ್ ಅವರು ನೀಡಿದ್ದಾರೆ.
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ 2,677 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು 25,650 ಮೀಟರ್ ವಿದ್ಯುತ್ ಮಾರ್ಗಕ್ಕೂ ಹಾನಿ ಸಂಭವಿಸಿದೆ. 75 ವಿದ್ಯುತ್ ಮಡಿಕೇರಿ, ಆ.12: ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರೀ ಮಳೆಗೆ ಸಾಕಷ್ಟು ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಸುರಿದ ವ್ಯಾಪಕ ಮಳೆ ಮತ್ತು ಭಾರೀ ಗಾಳಿಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮಡಿಕೇರಿ ವಿಭಾಗದಲ್ಲಿ ಉಂಟಾದ ಹಾನಿಯ ಮಾಹಿತಿಯನ್ನು ಸೆಸ್ಕ್ ಇಇ ಸೋಮಶೇಖರ್ ಅವರು ನೀಡಿದ್ದಾರೆ.
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ 2,677 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು 25,650 ಮೀಟರ್ ವಿದ್ಯುತ್ ಮಾರ್ಗಕ್ಕೂ ಹಾನಿ ಸಂಭವಿಸಿದೆ. 75 ವಿದ್ಯುತ್ ಸಂಭವಿಸಿದೆ.
ತ್ವರಿತ ಗತಿಯಲ್ಲಿ ಹಾನಿಗೊಳಗಾದ ವಿದ್ಯುತ್ ವಿತರಣಾ ಜಾಲದ ಪುನರ್ ಸ್ಥಾಪನೆಗೆ ವಿಶೇಷವಾಗಿ ನಿಯೋಜಿಸಿರುವ ಸಿಬ್ಬಂದಿ, ವಾಹನ ವಿದ್ಯುತ್ ಪರಿಕರಗಳ ವಿವರಗಳು ಇಂತಿವೆ.
ವಿಭಾಗದಲ್ಲಿ ಒಟ್ಟು 385 ಶಾಶ್ವತ ನಿರ್ವಹಣಾ ಸಿಬ್ಬಂದಿಗಳಿದ್ದು, ಹೆಚ್ಚುವರಿಯಾಗಿ 200 ಸಂಖ್ಯೆಯ ನಿರ್ವಹಣಾ ಸಿಬ್ಬಂದಿಗಳನ್ನು ಚಾವಿಸನಿನಿಯ ಮೈಸೂರು ಹಾಗೂ ವೃತ್ತಗಳಿಂದ ಹಾಗೂ ಗುತ್ತಿಗೆ ಏಜನ್ಸಿ ಮುಖಾಂತರ ನಿಯೋಜಿಸಲಾಗಿದೆ. ನಿಗಮದ ಸಿಬ್ಬಂದಿ ವತಿಯಿಂದ ದುರಸ್ತಿ ಕಾರ್ಯ ಕೈಗೊಂಡಿದ್ದು, ಇದರ ಜೊತೆಗೆ ಗುತ್ತಿಗೆದಾರರಿಂದಲೂ ಸಹ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ವಿಭಾಗದಲ್ಲಿ 6 ಲಾರಿ, 5 ಜೀಪುಗಳನ್ನು ಬಳಸಲಾಗುತ್ತಿದ್ದು, ಹೆಚ್ಚುವರಿಯಾಗಿ 15 ಪಿಕ್‍ಅಪ್ ಜೀಪುಗಳು, 5 ಲಾರಿಗಳು ಮತ್ತು 2 ಕ್ರೇನ್ ಲಾರಿಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ ಅಗತ್ಯಾನುಸಾರ ಇನ್ನೂ ಹೆಚ್ಚುವರಿ ವಾಹನ ಹಾಗೂ ಕ್ರೇನ್ ಲಾರಿ ಪಡೆಯಲಾಗುತ್ತಿದೆ. ದುರಸ್ತಿ ಕಾಮಗಾರಿಗಳಿಗೆ ಅಗತ್ಯವಿರುವ ಕಂಬಗಳು, ವಿದ್ಯುತ್ ಪರಿವರ್ತಕಗಳು, ವಾಹಕ ಹಾಗೂ ಇತರೆ ವಿದ್ಯುತ್ ಪರಿಕರಗಳನ್ನು ದಾಸ್ತಾನು ಮಾಡಲಾಗಿದೆ. ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ಇನ್ನೂ ಹೆಚ್ಚಿನ ಸಾಮಗ್ರಿ ನಿಗಮ ಕಚೇರಿಯಿಂದ ಸರಬರಾಜು ಮಾಡಲು ಖರೀದಿ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.