ಮಡಿಕೇರಿ, ಆ. 13: ಪ್ರಸಕ್ತ ಸಾಲಿನ ಹಸಿರು ಕರ್ನಾಟಕ, ಎಂ.ಎಂ.ಎಸ್.ವಿ. ಮತ್ತು ಆರ್.ಎಸ್.ಪಿ.ಡಿ. ಯೋಜನೆ ಯಡಿಯಲ್ಲಿ ಮಡಿಕೇರಿ ಅರಣ್ಯ ವಲಯದ ಸಸ್ಯ ಕ್ಷೇತ್ರದಲ್ಲಿ ಗಿಡಗಳನ್ನು ಬೆಳೆಸಲಾಗಿದ್ದು, ತಮ್ಮ ಜಮೀನಿನಲ್ಲಿ ಈ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪಡೆಯಬಹುದಾಗಿದೆ.
6x9 ಅಳತೆಯ ಸಸಿಗಳಿಗೆ ರೂ. 1 ಹಾಗೂ 8x12 ಅಳತೆಯ ಸಸಿಗಳಿಗೆ ರೂ. 3 ರಂತೆ ಹಣ ಪಾವತಿಸಿ ಸಸಿಗಳನ್ನು ಪಡೆಯಬಹುದಾಗಿದೆ. ಹೆಬ್ಬೇವು, ಹೊಂಗೆ, ನೆಲ್ಲಿ, ಸಂಪಿಗೆ, ಜಂಬು ನೇರಳೆ ಇತ್ಯಾದಿ ಸಸಿಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ದೂ. 08272-298161, 9741453166, 8197888373 ಅಥವಾ 9482246103 ಸಂಪರ್ಕಿಸ ಬಹುದು. ದಾಖಲಾತಿಗಳೊಂದಿಗೆ ಸಸಿ ಕೋರಿ ಅರ್ಜಿ, ಜಮೀನಿನ ಆರ್.ಟಿ.ಸಿ. ಸಲ್ಲಿಸತಕ್ಕದ್ದು ಎಂದು ಮಡಿಕೇರಿ ವಲಯ ಅರಣ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.