ಕೊರೊನಾ ಪಾಸಿಟಿವ್ ಬಂತೆಂದ ಕೂಡಲೇ ಹೆದರುವ ಅವಶ್ಯಕತೆ ಇಲ್ಲ. ಯಾವುದೇ ರೀತಿಯ ಟೆನ್ಷನ್ ಮಾಡಿಕೊಳ್ಳಬೇಡಿ ಎಂದು ಅಂಕನಹಳ್ಳಿಯ ಮಂಜುನಾಥ್ ಹೇಳುತ್ತಾರೆ. ನನಗೆ ವರ್ಕ್ಶಾಪ್ ಇದ್ದು, ವರ್ಕ್ಶಾಪ್ಗೆ ಕೊರೊನಾ ಸೋಂಕಿತರು ಬಂದು ಹೋಗಿದ್ದರು. ಹಾಗಾಗಿ ಕೋವಿಡ್ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ವರದಿ ಬಂದಿದೆ. ಆದರೆ, ನನಗೆ ಯಾವುದೇ ತೊಂದರೆ, ರೋಗದ ಲಕ್ಷಣಗಳಿರಲಿಲ್ಲ. ಆದರೂ ಪಾಸಿಟಿವ್ ಎಂದು ಮಡಿಕೇರಿಯಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. 16 ದಿವಸಗಳ ಬಳಿಕ ನೆಗೆಟಿವ್ ಎಂದು ವರದಿ ಬಂದ ಬಳಿಕ ನಮ್ಮನ್ನು ಅಲ್ಲಿಂದ ಕಳುಹಿಸಿದರು. ಈಗ ಆರಾಮಾಗಿ ವರ್ಕ್ಶಾಪ್ನಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿದರು.
ಕೊರೊನಾ ಸೋಂಕಿಗೆ ಯಾರೂ ಹೆದರಬೇಕಾಗಿಲ್ಲ. ಆಯಾಸ ಮಾಡಿಕೊಳ್ಳದೆ ವಿರಾಮದಿಂದಿರಬೇಕು. ಊಟ, ತಿಂಡಿ ಚೆನ್ನಾಗಿ ಸೇವಿಸಿ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಬೇಕೆಂದು ಜನತೆಗೆ ಸಲಹೆ ಮಾಡಿದ್ದಾರೆ.