ಕುಶಾಲನಗರ, ಆ. 12: ಕುಶಾಲನಗರ-ಮಡಿಕೇರಿ ರಸ್ತೆಯಲ್ಲಿರುವ ಬಡಾವಣೆಯ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ನ್ಯಾಯಾಲಯ ತಡೆಯಾಜ್ಞೆ ನೀಡಿದ ಬಗ್ಗೆ ತಿಳಿದುಬಂದಿದೆ. ಪಟ್ಟಣದ 1ನೇ ಬ್ಲಾಕ್‍ನಲ್ಲಿರುವ ಸರ್ವೆ ನಂ 115/1 ರಲ್ಲಿ ನರ್ಸಿಂಗ್ ಹೋಂ ತೆರೆಯುವುದಾಗಿ ಬಡಾವu Éಯೊಂದನ್ನು ಕಾದಿರಿಸಿದ್ದು ಇದೀಗ ಮಾರಾಟ ಮಾಡಲು ಪ್ರಯತ್ನ ನಡೆಯುತ್ತಿದೆ. ಪಟ್ಟಣ ಪಂಚಾಯ್ತಿಯ ಅನುಮತಿಯಿಲ್ಲದೆ ಬಡಾವಣೆ ನಿರ್ಮಾಣವಾಗುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದು ಪ್ರಕರಣ ಇತ್ಯರ್ಥವಾಗುವ ತನಕ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.