ಮಡಿಕೇರಿ, ಆ.12: ಪ್ರಸಕ್ತ (2020-21) ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು 2 ನೇ ವರ್ಷದ ಪಿಯುಸಿ ಸಾರ್ವತ್ರಿಕ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಪಡೆದ ಕರ್ನಾಟಕದ ಮೂಲ ನಿವಾಸಿ ಮಾಜಿ ಸೈನಿಕರ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಜನರಲ್ ಕೆಎಸ್ ತಿಮ್ಮಯ್ಯ ನಗದು ಪ್ರಶಸ್ತಿಯನ್ನು ಮಂಜೂರು ಮಾಡಲು ತ್ರಿ ಪ್ರತಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯ ಮಾದರಿಗಳನ್ನು ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಡಿಕೇರಿ ಅವರಿಂದ ಪಡೆದು 2020ರ ಡಿಸೆಂಬರ್, 15 ರೊಳಗೆ ಸಲ್ಲಿಸಬೇಕು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.