ಸುಂಟಿಕೊಪ್ಪ, ಆ. 11: 7ನೇ ಹೊಸಕೋಟೆ ಮೆಟ್ನಹಳ್ಳ ಆಟೋರಿಕ್ಷಾ ನಿಲ್ದಾಣದಲ್ಲಿ ದೆಹಲಿಯ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಆಟೋರಿಕ್ಷಾ ಮಾಲೀಕರಿಗೆ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರನ್ನು ವಿತರಿಸಲಾಯಿತು. ಈ ಸಂದರ್ಭ ಸುಂಟಿಕೊಪ್ಪ ಪ್ರಭಾರ ಠಾಣಾಧಿಕಾರಿ ಎಎಸ್‍ಐ ಕಾವೇರಪ್ಪ ಅವರು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ, ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಪದಾಧಿಕಾರಿಗಳಿಗೆ ಗುರುತಿನ ಚೀಟಿಯನ್ನು ವಿತರಿಸಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿ. ಕೃಷ್ಣ, ಕೊಡಗು ಜಿಲ್ಲಾ ಅಧ್ಯಕ್ಷ ಟಿ.ಎ. ನಾರಾಯಣ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸಂಶುದ್ಧೀನ್, ಮಂಜುಳಾ, ಮಡಿಕೇರಿ ತಾಲೂಕು ಸಮಿತಿಯ ಅಂಬಿಕಾ, ಕಾನೂನು ಸಲಹೆಗಾರ ಕೆ.ಎಸ್. ರಾಘವೇಂದ್ರ, ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪಿ.ಜಿ. ಮುರಳೀಧರ್, ಕಾರ್ಯದರ್ಶಿ ಸುರೇಶ, ಖಜಾಂಚಿ ಸಿನೋಜ್, ಸದಸ್ಯರಾದ ಶರತ್, ಅಭಿಲಾಷ್, ಅಶೋಕ್, ಸುರೇಂದ್ರ, ಶಿವ, ಜೈಜಗದೀಶ್ ಹಾಜರಿದ್ದರು.