ಸಂಪಾಜೆ, ಆ. 11: ತಾ. 5 ರಂದು ರಾತ್ರಿ ಸುರಿದ ಭಾರೀ ಮಳೆಗೆ ಚಡಾವಿನ ದಿ. ನೂಜೇಲು ಸುಂದರ ಅವರ ಮನೆಯ ಎದುರಿನ ಶೀಟ್‍ಗಳು ಗಾಳಿಗೆ ಹಾರಿಹೋಗಿದ್ದು, ಕೊಡಗು ಸಂಪಾಜೆ ಗ್ರಾಮದ ಚೆಡಾವು ಪರಿಸರದ ಯುವ ಕಾರ್ಯಕರ್ತರ ಪಂಚಶಕ್ತಿ ತಂಡ ಅದನ್ನು ಮರುಜೋಡಿಸಿ ಶ್ರಮದಾನ ಕಾರ್ಯ ನಿರ್ವಹಿಸಿದರು.

ಈ ಕಾರ್ಯದಲ್ಲಿ ಜಗದೀಶ್ ಪೂಜಾರಿ, ಪ್ರಸನ್ನ ಬಾಳೆಹಿತ್ಲು, ಯತೀಶ್ ರೈ, ರಾಮಯ್ಯ ನೂಜೇಲು ಮತ್ತು ತಂಡದ ಸದಸ್ಯರು ಶ್ರಮದಾನ ಕಾರ್ಯದಲ್ಲಿ ಭಾಗವಹಿಸಿದ್ದರು.