ಸುಂಟಿಕೊಪ್ಪ, ಆ. 11: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು ಗ್ರಾಮದ ಲಕ್ಷ್ಮಿ ತೋಟದ ಮಾಲೀಕ ಕೆ.ಡಿ. ಪೊನ್ನಪ್ಪ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ. ಕಚೇರಿ ಹಾಗೂ ಶೇಡ್‍ನಲ್ಲಿದ್ದ ವಾಹನಕ್ಕೆ ಹಾನಿಯಾಗಿದೆ. ನಷ್ಟ ಉಂಟಾಗಿರುವ ಬಗ್ಗೆ ಕಂದಾಯ ಇಲಾಖೆಗೆ ದೂರು ನೀಡಿದ ಮೇರೆಗೆ ಗ್ರಾಮಲೆಕ್ಕಿಗೆ ಹಾಗೂ ಕೆದಕಲ್ ಗ್ರಾ.ಪಂ. ಪಿಡಿಓ ವೀಣಾ ಭೇಟಿ ನೀಡಿ ಪರಿಶೀಲಿಸಿದರು.