ಮಡಿಕೇರಿ, ಆ. 11: ಕೆಲ ತಿಂಗಳ ಹಿಂದೆ ವೀರಾಜಪೇಟೆಯ ಸುಂಕದಕಟ್ಟೆ ಬಳಿ ಇರುವ ಪಂಪಿನಕೆರೆ ಮೈದಾನದಲ್ಲಿ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಆರೋಪಿಗಳ ಪೈಕಿ ಪ್ರಮುಖ ಆರೋಪಿಗಳಾದ ನಿಸಾರ್ ಅಹ್ಮದ್ ಹಾಗೂ ಎ.ಎಸ್. ಸಿದ್ದಿಕ್ ಇವರುಗಳಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ. ನ್ಯಾಯಾಧೀಶರಾದ ಪಿ.ಎಸ್. ಚಂದ್ರಶೇಖರ ಅವರು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದು, ಆರೋಪಿಗಳ ಪರ ಹೈಕೋರ್ಟ್ ವಕೀಲ ಆರ್.ಕೆ. ಮಹದೇವ ವಕಾಲತ್ತು ವಹಿಸಿದ್ದರು.