ವೀರಾಜಪೇಟೆ, ಆ. 9: ಕರ್ನಾಟಕ-ಕೇರಳ ರಾಜ್ಯಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ಕೊವಿಡ್ ಸೊಂಕು ಹರಡುವ ಭೀತಿಯಿಂದ ಬಂದ್ ಮಾಡಲಾಗಿತ್ತು. ಇದೀಗ ಸಂಚಾರಕ್ಕೆ ಮುಕ್ತ ಮಾಡಲಾಗಿದ್ದರೂ ರಾತ್ರಿ ಸಂಚಾರಕ್ಕೆ ನೀರ್ಬಂಧ ವಿಧಿಸಲಾಗಿದೆ ಎಂದು ಕೇರಳ ರಾಜ್ಯದ ಇರಿಟ್ಟಿ ತಾಲೂಕು ತಹಶೀಲ್ದಾರ್ ಕೆ.ಕೆ. ದಿವಾಕರನ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ರಾಜ್ಯ ಗಡಿ ಮಾಕುಟ್ಟದಲ್ಲಿ ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಜಿಲ್ಲಾಡÀಳಿತವು ರಸ್ತೆಗೆ ಮಣ್ಣು ಸುರಿದು ಸಂಚಾರಬಂದ್ ಮಾಡಿತ್ತು. ಸುಮಾರು ಐದು ತಿಂಗಳು ರಸ್ತೆ ಬಂದ್ ಆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಅಂತರ್ ರಾಜ್ಯ ಸಂಚಾರಕ್ಕೆ ನಿರ್ಬಂಧ ಹಿಂಪಡೆಯಿತು. ಜಿಲ್ಲಾಡಳಿತವು ಶನಿವಾರ ರಾತ್ರಿ ವೇಳೆಯಲ್ಲಿ ಮಣ್ಣು ಸರಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ.
ಕೂಟುಪೆÇಳೆ ಸ್ಥಳಕ್ಕೆ ಭೇಟಿ ಮಾಡಿದ ತಹಶೀಲ್ದಾರ್ ಕೆ.ಕೆ. ದಿವಾಕರನ್ ಅವರು ಕರ್ನಾಟಕ ರಾಜ್ಯ ಸರ್ಕಾರವು ಮತ್ತು ಕೊಡಗು ಜಿಲ್ಲಾಡಳಿತವು ಹೆದ್ದಾರಿ ತೆರವು ಗೊಳಿಸಿರುವ ಹಿನ್ನೆಲೆಯಲ್ಲಿ ಸರಕು ವಾಹನಗಳಿಗೆ ಪ್ರಸ್ತುತ ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ವಾಹನ ಸವಾರರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಂತರದ ದೃಢೀಕರಣ ಪತ್ರ ನೀಡುವ ಮೂಲಕ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ.
ಸೋಂಕು ಹರಡುವ ಪ್ರಮಾಣ ಕಡಿಮೆಗೊಂಡ ನಂತರದಲ್ಲಿ ಹಂತಹಂತವಾಗಿ ಎಲ್ಲಾ ವಾಹನಗಳಿಗೆ ಅನುಮತಿ ನೀಡಲಾಗುವುದು. ಮಳೆಯ ಕಾರಣ ಮಾಕುಟ್ಟ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ವಾಹನಗಳಿಗೆ ತುರ್ತು ಪರಿಸ್ಥಿತಿಗೆ ಅನುಗುಣವಾಗಿ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಹೇಳಿದರು.
ಪಾಯಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಅಶೋಕನ್ ಅವರು ಮಾತನಾಡಿ ಕೊರೊನಾ ಸೋಂಕು ಹರಡುವುದರಿಂದ ಕೊಡಗು ಜಿಲ್ಲಾಡಳಿತವು ರಸ್ತೆಗೆ ಮಣ್ಣು ಸುರಿದು ರಸ್ತೆ ಸಂಚಾರ ಬಂದ್ ಮಾಡಿತ್ತು ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಿತ್ತು. ಜನತೆಯ ಹಿತದೃಷ್ಟಿಯಿಂದ ಸೋಂಕು ಹತ್ತಿಕ್ಕಲು ಎಲ್ಲಾ ಇಲಾಖೆಗಳ ಮತ್ತು ರಾಜ್ಯ ಸರ್ಕಾರಗಳ ಸಹಕಾರ ಮುಖ್ಯ ಎಂದರು.
-ಕೆ.ಕೆ.ಎಸ್.