ಗೋಣಿಕೊಪ್ಪ ವರದಿ, ಆ. 10: ಇಲ್ಲಿನ ವೆಂಕಟಪ್ಪ ಬಡಾವಣೆಗೆ ಮುಂದಿನ ಒಂದು ತಿಂಗಳಿನಲ್ಲಿ ಹೆಚ್ಚು ಸಾಮಥ್ರ್ಯವಿರುವ ಟ್ರಾನ್ಸ್‍ಫಾರ್ಮರ್ ಅಳವಡಿಸುವುದಾಗಿ ಸೆಸ್ಕ್ ಕಿರಿಯ ಅಧಿಕಾರಿ ಕೃಷ್ಣಕುಮಾರ್ ಭರವಸೆ ನೀಡಿದರು. ಕಡಿಮೆ ಶಕ್ತಿಯ ಟ್ರಾನ್ಸ್‍ಫಾರ್ಮರ್‍ನಿಂದಾಗಿ ಬಡಾವಣೆಯ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ನಿವಾಸಿಗಳು ಗೋಣಿಕೊಪ್ಪ ಸೆಸ್ಕ್ ಕಚೇರಿಗೆ ತೆರಳಿ ಮನವಿ ಮಾಡಿಕೊಂಡರು. ಮನವಿ ಸ್ವೀಕರಿಸಿ ತಾತ್ಕಾಲಿಕ ಪರಿಹಾರ ಮಾಡಿಕೊಟ್ಟರು. ಈ ಸಂದರ್ಭ ಬಡಾವಣೆ ಪ್ರಮುಖರಾದ ಸಣ್ಣುವಂಡ ರಜನ್ ತಿಮ್ಮಯ್ಯ, ಶ್ಯಾಂ ಇತರಿದ್ದರು.