ವೀರಾಜಪೇಟೆ, ಆ. 10 : ವೀರಾಜಪೇಟೆಯ ಪಂಜರ್‍ಪೇಟೆ ಬಳಿಯ ಸುಭಾಷ್‍ನಗರದಲ್ಲಿ 6 ಮಂದಿ ಕಾರ್ಮಿಕರಿಗೆ ಕೊರೊನಾ ಸೋಂಕಿನ ವರದಿಯಲ್ಲಿ ಪಾಸಿಟಿವ್ ಬಂದ ಕಾರಣ ಎಲ್ಲರನ್ನು ಚಿಕಿತ್ಸೆಗಾಗಿ ಬಾಳುಗೋಡಿನ ಮೊರಾರ್ಜಿ ವಸತಿ ಶಾಲೆಯ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಸುಮಾರು 6 ಕುಟುಂಬಗಳಿರುವ ಸುಭಾಷ್‍ನಗರದ ಒಂದು ಭಾಗದ ಪ್ರದೇಶವನ್ನು ಸೀಲ್ ಡೌನ್ ಮಾಡಿ ಸಾರ್ವಜನಿಕ ಸಂಪರ್ಕದಿಂದ ತಡೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಆರೋಗ್ಯ ತಂಡ, ಶುಶ್ರೂಷಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಪಟ್ಟಣ ಪಂಚಾಯಿತಿಯ ಕೊರೊನಾ ಜಾಗೃತಿ ಸಮಿತಿ, ಉಸ್ತುವಾರಿ ಮಹಮ್ಮದ್ ರಾಫಿ, ಎಸ್.ಎಚ್. ಮತೀನ್, ವಿ.ಟಿ. ನಾಣಯ್ಯ, ಪಟ್ಟಣ ಪಂಚಾಯಿತಿಯ ಸುಲೇಖಾ, ಐವಾನ್ ಮತ್ತಿತರರು ಹಾಜರಿದ್ದರು.ಸುಭಾಷ್ ನಗರದ ಸೀಲ್‍ಡೌನ್ ವೀರಾಜಪೇಟೆ ಪಟ್ಟಣದಲ್ಲಿ ಹನ್ನೆರಡನೇ ಸೀಲ್‍ಡೌನ್ ಪ್ರಕರಣವಾಗಿದೆ.