ಸೋಮವಾರಪೇಟೆ, ಆ. 10: ಇಲ್ಲಿನ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಕೆ.ಎನ್. ತೇಜಸ್ವಿ, ಕಾರ್ಯದರ್ಶಿ ಯಾಗಿ ಸಿ.ಕೆ.ರೋಹಿತ್, ಲಿಯೋ ಕ್ಲಬ್ ಅಧ್ಯಕ್ಷರಾಗಿ ಎಸ್.ಎನ್.ಂ iÀುಶ್ವಿನ್, ಕಾರ್ಯದರ್ಶಿಯಾಗಿ ಲೀಷ್ಮಾ ಆಯ್ಕೆಯಾಗಿದ್ದು, ಸ್ಥಳೀಯ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ 2020-21ರ ಲಯನ್ಸ್ ಕ್ಲಬ್‍ನ ಪದಾಧಿಕಾರಿಗಳಿಗೆ ಕ್ಲಬ್‍ನ ಪ್ರಾಂತೀಯ ಅಧ್ಯಕ್ಷರಾದ ಕೆ.ಎಂ. ಜಗದೀಶ್ ಪ್ರತಿಜ್ಞಾವಿಧಿ ಬೋಧಿಸಿದರು.

ಈ ಸಂದರ್ಭ ಮಾತನಾಡಿದ ಅವರು, ದೇಶದಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಮಾಡುವವರ ಸಂಖ್ಯೆ ಜಾಸ್ತಿಯಾದಂತೆ, ಸಮಸ್ಯೆಗಳು ಕಡಿಮೆಯಾಗುತ್ತ ಹೋಗುತ್ತವೆ. ಈ ಕಾರಣದಿಂದ ಯುವ ಸಮುದಾಯ ಸೇವಾಸಂಸ್ಥೆಗಳಲ್ಲಿ ಕೆಲಸ ಮಾಡಬೇಕು ಎಂದರು. ವೇದಿಕೆಯಲ್ಲಿ ವಲಯಾಧ್ಯಕ್ಷ ಶಶಿಕುಮಾರ್, ನಿಕಟಪೂರ್ವ ಅಧ್ಯಕ್ಷ ಎಂ.ಎ. ಹರೀಶ್, ಖಜಾಂಚಿ ಎನ್.ಬಿ. ರಾಮಚಂದ್ರ ಉಪಸ್ಥಿತರಿದ್ದರು.

ಇದೇ ಸಂದರ್ಭ ಲಯನ್ಸ್ ಸಂಸ್ಥೆಯ ಖಜಾಂಚಿಯಾಗಿ ಎಸ್.ಎನ್. ಯೋಗೇಶ್, ಉಪಾಧ್ಯಕ್ಷರುಗಳಾಗಿ ಸಿ.ಕೆ. ಮಲ್ಲಪ್ಪ, ಪವನ್ ಮುತ್ತಪ್ಪ, ವಿವಿಧ ಪ್ರಮುಖ ಹುದ್ದೆಗಳಿಗೆ ಎಸ್.ಬಿ. ಲೀಲಾರಾಮ್, ಎಂ.ಎ. ಹರೀಶ್, ಜೆ.ಸಿ. ಶೇಖರ್, ಎನ್.ಬಿ. ರಾಮಚಂದ್ರ, ಎ.ಎಸ್. ಮಲ್ಲೇಶ್, ಮಂಜುನಾಥ್‍ಚೌಟ, ಧನುಕುಮಾರ್, ಶಶಿಕಲಾ ಚೌಟ, ಜಲಜಾ ಶೇಖರ್, ಉಷಾತೇಜಸ್ವಿ, ಜಿ.ಟಿ. ಯೋಗೇಂದ್ರ, ವಿರೇಂದ್ರ ವಿಶ್ವನಾಥ್, ಎಸ್.ಹೆಚ್. ಬಸವರಾಜ್, ಹೆಚ್.ಎಂ. ಬಸಪ್ಪ, ಸಿ.ಕೆ. ರಾಜೀವ್, ಎನ್.ಎ. ಕಾವೇರಪ್ಪ, ಕೆ.ಎಸ್. ಶೃತಿ, ಸಿ.ಕೆ. ಶಿವಕುಮಾರ್, ಎ.ಆರ್. ಮುತ್ತಣ್ಣ, ಪ್ರತಾಪ್ ಈರಪ್ಪ, ಜಗದೀಶ್ ಕೆ.ಎಂ., ಎ.ಕೆ. ಮುತ್ತಣ್ಣ, ಪ್ರತಾಪ್ ಈರಪ್ಪ ಅವರುಗಳು ನೇಮಕಗೊಂಡರು.