ಡಾ. ಗ್ರೀಷ್ಮಾ ಸಲಹೆ
ಜಾಗತಿಕ ಕೊರೊನಾ ಸೋಂಕು ನಿಜವಾಗಿಯೂ ಭಯಪಡುವ ಕಾಯಿಲೆ ಅಲ್ಲ. ಬದಲಾಗಿ ಯಾವುದೇ ಸೋಂಕಿನ ಲಕ್ಷಣ ಕಂಡುಬಂದಾಗ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಇಲ್ಲಿಯೂ ಚಿಕಿತ್ಸೆ ಮುಖ್ಯವಲ್ಲ, ಬದಲಾಗಿ ಕೊರೊನಾ ಸೋಂಕಿತರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ನಾನು ಓರ್ವ ತಜ್ಞೆಯಾಗಿ, ಗೃಹಿಣಿಯಾಗಿ ಈ ಸೋಂಕಿಗೆ ಸಿಲುಕಿದಾಗ ಎಲ್ಲರಿಗೂ ಆತಂಕವಿತ್ತು. ಅನಿವಾರ್ಯವಾಗಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯೊಂದಿಗೆ ವೈದ್ಯರ ಸಲಹೆಯಂತೆ 14 ದಿನಗಳ ಕ್ವಾರಂಟೈನ್ ಇದ್ದೆ. ಯಾವುದೇ ತೊಂದರೆ ಇಲ್ಲದಂತೆ ಸಂಪೂರ್ಣ ಗುಣಮುಖಳಾಗಿ ಎಂದಿನಂತೆ ಜೀವನ ನಿರ್ವಹಿಸುತ್ತಿರುವೆ.
ಪ್ರಮುಖವಾಗಿ ಕೊರೊನಾ ಸೋಂಕಿತರು ಯಾವುದೇ ಒತ್ತಡದಲ್ಲಿ ಸಿಲುಕಬಾರದು, ನೆಮ್ಮದಿ ಕಳೆದುಕೊಳ್ಳಬಾರದು. ವಿಟಮಿನ್ ಮಾತ್ರೆ ಸೇವಿಸಬೇಕು. ಸದಾ ಬಿಸಿನೀರು ಕುಡಿಯಬೇಕು. ಹೊಟ್ಟೆ ತುಂಬಾ ದಿನದ ಮೂರು ಹೊತ್ತು ಒಳ್ಳೆಯ ಆಹಾರ ಸೇವಿಸಬೇಕು. ಹಣ್ಣು-ಹಂಪಲು, ಹಾಲು, ಮೊಟ್ಟೆ ಇತ್ಯಾದಿ ಸೇವನೆ ಒಳ್ಳೆಯದು. ಕೊರೊನಾ ನಮ್ಮನ್ನು ನಾವೇ ರಕ್ಷಿಸಿಕೊಳ್ಳಲು ಇರುವಂಥ ಸಾಧನ ಎನ್ನಬಹುದು. ಸರಳ ವ್ಯಾಯಾಮ, ನಡಿಗೆ ಇತ್ಯಾದಿ 14 ದಿನಗಳ ಕ್ವಾರಂಟೈನ್ ದಿನಗಳಲ್ಲಿ ನಮಗೆ ಸಹಕಾರಿಯಾಗಲಿದೆ. ಮುಖ್ಯವಾಗಿ ‘ಆತ್ಮವಿಶ್ವಾಸವೇ ಮದ್ದು’ ಇದು ನನ್ನ ಅನುಭವ.