ಗೋಣಿಕೊಪ್ಪ ವರದಿ, ಆ. 10: ವಡ್ಡರಮಾಡು ಕೊರೊನಾ ಕಂಟೈನ್ಮೆಂಟ್ ಪ್ರದೇಶದ ಎಲ್ಲಾ 38 ಕುಟುಂಬಗಳಿಗೆ ವೀರಾಜಪೇಟೆ ತಾಲೂಕು ಕೃಷಿ ಮೋರ್ಚಾ ಸದಸ್ಯ ಕಾಟಿಮಾಡ ಶರೀನ್ ಮುತ್ತಣ್ಣ ಆಹಾರ ಕಿಟ್ ವಿತರಣೆ ಮಾಡಿದರು.

ತರಕಾರಿ ಸಿಗುತ್ತಿಲ್ಲ ಎಂದು ನಿವಾಸಿಗಳು ಅಳಲು ತೊಂಡಿಕೊಂಡಿದ್ದ ಕಾರಣ ನೀಡಲಾಗಿದೆ ಎಂದು ಶರೀನ್ ಮುತ್ತಣ್ಣ ಈ ಸಂದರ್ಭ ತಿಳಿಸಿದರು.

ಕಾಲಭೈರವ ದೇವಸ್ಥಾನದ ಅಧ್ಯಕ್ಷ ಮೇಚಂಡ ಸೋಮಯ್ಯ, ಸ್ಥಳೀಯರಾದ ಪಡಿಞರಂಡ ಪ್ರಭುಕುಮಾರ್, ಮಲ್ಲೇಂಗಡ ಶಶಿ ಮಣಿ, ಕಾಟಿಮಾಡ ಪೆÇನ್ನಣ್ಣ, ಗಣೇಶ್, ನಾಗರಾಜು, ನಾಗ, ಶಿವದಾಸ್, ಶೇಖರ್, ಹಾಜರಿದ್ದರು.

ಸುಂಟಿಕೊಪ್ಪ, ಆ. 10: ಪಟ್ಟಣದ 1ನೇ ವಿಭಾಗದ ಜನತಾ ಕಾಲೋನಿ ಸೀಲ್‍ಡೌನ್‍ಗೊಂಡಿದ್ದು, ದಿನಸಿ ತರಕಾರಿ ಸಾಮಗ್ರಿಗಳನ್ನು ಟಿಂಬರ್ ವ್ಯಾಪಾರಿಯೊಬ್ಬರು ನೀಡಿದರು.

ಜನತಾ ಕಾಲೋನಿಯ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ಕಂಡು ಬಂದಿದ್ದು, ಜನತಾ ಕಾಲೋನಿಯ 16 ಮನೆಯನ್ನು ಸೀಲ್‍ಡೌನ್‍ಗೊಳಿಸಲಾಗಿತ್ತು. ಶಿವರಾಂ ರೈ ಬಡಾವಣೆಯ ಟಿಂಬರ್ ವ್ಯಾಪಾರಿ ಬಾಪ್ಪು ಅವರು ದಿನಸಿ ಹಾಗೂ ತರಕಾರಿ ಸಾಮಗ್ರಿಗಳನ್ನು ವಿತರಿಸಿದರು.