ಮಡಿಕೇರಿ, ಆ. 10: ಇಂದು ಸಂಜೆ 5 ಗಂಟೆಗೆ ಹೊಸ ಬಡಾವಣೆಯಲ್ಲಿ ಕಂಬದಿಂದ ವಿದ್ಯುತ್ ಹರಿದ ಪರಿಣಾಮ ಹಸು ಬಲಿಯಾಗಿದೆ. ಅದೃಷ್ಟವಶಾತ್ ಜನರಿಗೆ ಯಾವುದೇ ತೊಂದರೆ ಆಗಿರುವುದಿಲ್ಲ. ಸರಿಯಾದ ಸಮಯಕ್ಕೆ ಅಕ್ಕಪಕ್ಕದ ಮನೆಯವರು ಸೆಸ್ಕ್ ಸಿಬ್ಬಂದಿಗಳಿಗೆ ಫೆÇೀನ್ ಮಾಡಿ ವಿದ್ಯುತ್ ಕಡಿತಗೊಳಿಸಿದ್ದಾರೆ. ಅದರ ಜೊತೆಗಿದ್ದ ಇನ್ನೊಂದು ಹಸುವಿನ ಜೀವ ರಕ್ಷಣೆಯಾಗಿದೆ. ವಿಷಯ ತಿಳಿದ ತಕ್ಷಣ ನಗರಸಭೆ ಮಾಜಿ ಸದಸ್ಯ ಉಮೇಶ್ ಮತ್ತು 14ನೇ ವಾರ್ಡ್ ಅಧ್ಯಕ್ಷ ಕುಳಿಯಕಂಡ ಸಂಪತ್ ರಕ್ಷಣೆಗೆ ಧಾವಿಸಿದರು.