ಮಡಿಕೇರಿ, ಆ.10: ಜಿಲ್ಲೆಯಲ್ಲಿ ಹೊಸದಾಗಿ 36 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 741 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 470 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 11 ಮಂದಿ ಸಾವನ್ನಪ್ಪಿದ್ದು, 260 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ 210 ನಿಯಂತ್ರಿತ ಪ್ರದೇಶಗಳಿವೆ.

ಹೊಸ ಪ್ರಕರಣಗಳ ವಿವರ

ಕುಶಾಲನಗರದ ಗೊಂದಿಬಸವನಹಳ್ಳಿಯ ಚಿಕ್ಕಣ್ಣ ಬಡಾವಣೆಯ 39, 72 ವರ್ಷದ ಪುರುಷ, 14 ವರ್ಷದ ಬಾಲಕ ಮತ್ತು 10 ವರ್ಷದ ಬಾಲಕಿ, ಗೋಣಿಕೊಪ್ಪ ರಸ್ತೆಯ ಸುಭಾಷ್‍ನಗರದ 25 ವರ್ಷದ ಮಹಿಳೆ, 32, 23, 27, 20 ಮತ್ತು 21 ವರ್ಷದ ಪುರುಷರು, ಸುಂಟಿಕೊಪ್ಪದ ಕೆ.ಇ.ಬಿ ರಸ್ತೆಯ 25 ವರ್ಷದ ಮಹಿಳೆ ಮತ್ತು 1 ವರ್ಷದ ಗಂಡು ಮಗು, ವೀರಾಜಪೇಟೆಯ ಕುಟ್ಟಂದಿ ಗ್ರಾಮದ 73 ವರ್ಷದ ಮಹಿಳೆ, 15 ವರ್ಷದ ಬಾಲಕಿ ಮತ್ತು 4 ವರ್ಷದ ಬಾಲಕ, ಪೆÇನ್ನಂಪೇಟೆಯ ಕುಂದಾ ರಸ್ತೆಯ 75 ವರ್ಷದ ಪುರುಷ ಮತ್ತು 20 ವರ್ಷದ ಮಹಿಳೆ, ವೀರಾಜಪೇಟೆ ನಾಲ್ಕೇರಿ ಗ್ರಾಮದ 65 ವರ್ಷದ ಪುರುಷ, ವೀರಾಜಪೇಟೆ ಮತ್ತೂರು ಗ್ರಾಮದ ಆರೋಗ್ಯ ವಸತಿ ಗೃಹದ 29 ವರ್ಷದ ಮಹಿಳೆ, ಸೋಮವಾರಪೇಟೆಯ ಒ.ಎಲ್.ವಿ ಕಾನ್ವೆಂಟ್ ರಸ್ತೆಯ 40 ವರ್ಷದ ಪುರುಷ, ಶನಿವಾರಸಂತೆಯ ಮಾದರಹೊಸ ಹಳ್ಳಿಯ 60 ವರ್ಷದ ಪುರುಷ, ನಾಪೆÇೀಕ್ಲುವಿನ ಕುಂಜಿಲದ 40 ವರ್ಷದ ಮಹಿಳೆ, ಮಡಿಕೇರಿ ವಿಜಯ ವಿನಾಯಕ ದೇವಾಲಯ ರಸ್ತೆಯ 29 ವರ್ಷದ ಪುರುಷ, ಕುಶಾಲನಗರ ಬಿ.ಎಂ ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ಬಳಿಯ 37 ವರ್ಷದ ಪುರುಷ, ಕುಶಾಲನಗರದ ನಿಂಗೇಗೌಡ ಬಡಾವಣೆಯ 45 ವರ್ಷದ ಪುರುಷ, ಹಾಸನದ ಅರಕಲಗೋಡುವಿನ ಬೈಪಾಸ್ ರಸ್ತೆಯ 54 ವರ್ಷದ ಪುರುಷ, ಮಡಿಕೇರಿಯ ಐಟಿಐ ಕಟ್ಟಡ ಸಮೀಪದ 60 ವರ್ಷದ ಪುರುಷ, ಕುಶಾಲನಗರದ ಗೊಂದಿಬಸವನಹಳ್ಳಿಯ ಚಿಕ್ಕಣ್ಣ ಬಡಾವಣೆಯ 46 ವರ್ಷದ ಪುರುಷ, ಕುಶಾಲನಗರ ಬಲಮುರಿ ರಸ್ತೆಯ ಮಾರುತಿ ಶಾಲೆ ಬಳಿಯ 28 ವರ್ಷದ ಪುರುಷ, ಶನಿವಾರಸಂತೆಯ 60, 36 ವರ್ಷದ ಮಹಿಳೆ, 10 ವರ್ಷದ ಬಾಲಕಿ, 2 ವರ್ಷದ ಬಾಲಕ, ಮಡಿಕೇರಿ ಚೈನ್ ಗೇಟ್ ಬಳಿಯ ವಸತಿ ಗೃಹದ 40 ವರ್ಷದ ಪುರುಷ, ಮಡಿಕೇರಿಯ ಕೆ.ನಿಡುಗಣೆಯ 32 ವರ್ಷದ ಮಹಿಳೆ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿ ಗೃಹದ 52 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.