ಮಡಿಕೇರಿ, ಆ. 10: ಜಿಲ್ಲಾ ಪ್ರವಾಸ ಕೈಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ರಾಜಕಾರಣಿ ಎಂ.ಸಿ. ನಾಣಯ್ಯ ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭ ಜೀವನದ ಹಲವಾರು ನೆನಪುಗಳ ಕೃತಿಯಾದ ‘ನೆನಪುಗಳು ಮಾಸುವ ಮುನ್ನ’ ಕೃತಿಯನ್ನು ಶಿವಕುಮಾರ್ ಅವರಿಗೆ ನಾಣಯ್ಯ ಅವರು ಕೊಡುಗೆಯಾಗಿ ನೀಡಿದರು. ಕಾಂಗ್ರೆಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ, ಹಿರಿಯ ಕಾಂಗ್ರೆಸ್ ಮುಖಂಡ ಮಿಟ್ಟು ಚಂಗಪ್ಪ, ಎ.ಎಸ್. ಚಂದ್ರಮೌಳಿ, ಟಿ.ಪಿ. ರಮೇಶ್ ಹಾಜರಿದ್ದರು.