ಮಡಿಕೇರಿ, ಆ. 9: ಧಾರಾಕಾರ ಮಳೆ-ಗಾಳಿಯ ಪರಿಣಾಮವಾಗಿ ದಕ್ಷಿಣ ಕೊಡಗಿನ ಬಾಡಗರಕೇರಿಯ ನಿವಾಸಿ ಅಮ್ಮತ್ತೀರ ರಾಜೇಶ್ ಅವರಿಗೆ ಸೇರಿದ ಕಾಫಿ ತೋಟದೊಳಗೆ ಜಲ ಎದ್ದು ಹಾನಿ ಉಂಟಾಗಿದೆ. ಏರುತ್ತಿರುವ ಜಲದಿಂದಾಗಿ ಹಲವು ಸಮಸ್ಯೆಗಳಾಗಿವೆ. ವರ್ಷಂಪ್ರತಿ ಈ ವ್ಯಾಪ್ತಿಯಲ್ಲಿ ತೀವ್ರ ಮಳೆಯಾಗುವುದರಿಂದ ಕೃಷಿಕರು ಬದುಕು ಸಾಗಿಸುವುದೇ ದುಸ್ತರವಾಗಿದೆ. ಶಾಸಕರು-ಸಂಸದರು ವಿಶೇಷ ಗಮನ ಹರಿಸಿ ಇಲ್ಲಿಗೆ ಪ್ಯಾಕೇಜ್ ನೀಡುವಂತಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.